ಇರಾಕ್ ಹೊಸ ಪ್ರಧಾನಿಯಾಗಿ ಅದ್ನಾನ್ ಸುರುಫಿ

0
609

ಸನ್ಮಾರ್ಗ ವಾರ್ತೆ

ಬಾಗ್ದಾದ್, ಮಾ.18: ಇರಾಕಿಗೆ ಅದ್ನಾನ್ ಅಲ್ ಸುರುಫಿ ಹೊಸ ಪ್ರಧಾನಿಯಾಗಿ ಅಧ್ಯಕ್ಷ ಬರ್‍ಹಾಂ ಸಾಲಿಹ್ ನೇಮಿಸಿದ್ದು ತಿಂಗಳುಗಟ್ಟಲೆ ಇದ್ದ ರಾಜಕೀಯ ಅನಿಶ್ಚಿತತೆ ಕೊನೆಗೊಂಡಂತಾಗಿದೆ. ಸುರಫಿ 54 ವರ್ಷದವರಾಗಿದ್ದು, ಶಿಯಾಗಳಲ್ಲಿ ಜನಪ್ರಿಯ ನಾಯಕನಾಗಿದ್ದಾರೆ.
ಅವರು ಈ ಹಿಂದೆ ಶಿಯ ಪ್ರಾಬಲ್ಯದ ನಗರವಾದ ನಜಫ್‍ನ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಭ್ರಷ್ಟಾಚಾರ, ಆರ್ಥಿಕ ಅನಿಶ್ಚಿತತೆಯನ್ನು ಪ್ರತಿಭಟಿಸಿ ಇತ್ತೀಚೆಗೆ ಇರಾಕಿನಲ್ಲಿ ಬಲವಾದ ಜನತಾ ಹೋರಾಟ ನಡೆದಿತ್ತು. ನಂತರ ಉಸ್ತುವಾರಿ ಪ್ರಧಾನಿಯಾಗಿ ಆದಿಲ್ ಅಬ್ದುಲ್ ಮಹ್ದಿ ಬಂದಿದ್ದರು. ಡಿಸೆಂಬರ್ ನಲ್ಲಿ ಅವರ ವಿರುದ್ಧವೂ ಪ್ರತಿಭಟನೆ ನಡೆದಾಗ ಅವರು ರಾಜೀನಾಮೆ ನೀಡಿದ್ದರು. ಇವರಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಹೊಸದಾಗಿ ಅದ್ನಾನ್ ಅಲ್ ಸುರುಫಿ ನೇಮಕವಾಗಿದ್ದಾರೆ.