ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ.19: ಪ್ರಜೆಗಳು ಮತ್ತು ಪ್ರಜೆಗಳಲ್ಲದವರನ್ನು ಪ್ರತ್ಯೇಕಿಸಿ ಗುರುತಿಸಲು ಎನ್ಆರ್ ಸಿ ಯಾವುದೇ ಸಾರ್ವಭೌಮ ದೇಶಕ್ಕೆ ಅನಿವಾರ್ಯವಾಗಿದೆ ಎಂದು ಕೇಂದ್ರ ಸರಕಾರ ಸುಪ್ರೀಮ್ ಕೋರ್ಟಿನಲ್ಲಿ ಪ್ರತಿಪಾದಿಸಿದೆ. ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಸಲ್ಲಿಸಲಾದ ಅರ್ಜಿಗಳಿಗೆ ಉತ್ತರವಾಗಿ ಮಂಡಿಸಲಾದ ಅಫಿದಾವಿತ್ನಲ್ಲಿ ಕೇಂದ್ರ ಸರಕಾರ ಹೀಗೆ ಹೇಳಿದೆ. ಎನ್ಆರ್ ಸಿ ಕುರಿತು ಸರಕಾರ ಚರ್ಚಿಸಿಲ್ಲ. ಆ ಕುರಿತು ಚಿಂತಿಸಿಲ್ಲ ಎಂದು ಪ್ರಧಾನಿ ನರೇಂದ್ ರಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಕ್ಕೆ ತದ್ವಿರುದ್ಧವಾಗಿ ಕೇಂದ್ರ ಸರಕಾರ ಅಫಿದಾವಿತ್ನಲ್ಲಿ ಹೀಗೆ ಸೂಚಿಸಿದೆ.
ಪ್ರಜೆಗಳು, ಅನಧಿಕೃತ ವಲಸಿಗರು, ವೀಸಾ ಇರುವ ವಿದೇಶಿಯರು ಎಂದು ಮೂರು ರೀತಿಯ ಜನರು ದೇಶದಲ್ಲಿ ವಾಸಿಸುತ್ತಿದ್ದಾರೆ. 1946ರ ವಿದೇಶ ನೀತಿ, 1920ರ ಪಾಸ್ಪೋರ್ಟ್ ನೀತಿ, ಅನಧಿಕೃತ ವಲಸೆಗಾರರ 1955ರ ಕಾನೂನು ಪ್ರಕಾರ ಎನ್ಆರ್ ಸಿ ಕೇಂದ್ರ ಸರಕಾರದ ಜವಾಬ್ದಾರಿಯಾಗಿದೆ. ಜನರನ್ನು ದೇಶದಿಂದ ಹೊರತಳ್ಳುವುದು ಮತ್ತು ಪ್ರವೇಶ ನೀಡುವುದು ಇವೆರಡೂ ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿದೆ. 1946ರ ವಿದೇಶ ನೀತಿ ಪ್ರಕಾರ ವಿದೇಶಿಯರನ್ನು ಹೊರತಳ್ಳುವುದಕ್ಕೆ ಸರಕಾರಕ್ಕೆ ಅಧಿಕಾರವಿದೆ. ಅನಧಿಕೃತವಾಗಿ ವಾಸಿಸಿದವರಿಗೆ ಸಂವಿಧಾನದ 32ನೇ ಪರಿಚ್ಛೇದ ಪ್ರಕಾರ ಹೆಚ್ಚು ಕಾಲ ದೇಶದಲ್ಲಿರಲು ಮತ್ತು ಪೌರತ್ವಕ್ಕೆ ಹಕ್ಕು ಮಂಡಿಸಲು ಬಿಡಲಾಗದು.
ಅನಧಿಕೃತವಾಗಿ ವಲಸೆ ಬಂದವರನ್ನು ಕಾನೂನು ಮೂಲಕ ಗಡೀಪಾರು ಮಾಡಲು ಸರಕಾರಕ್ಕೆ ಸ್ವತಂತ್ರ ಅಧಿಕಾರ ಇದೆ. ಅನಧಿಕೃತ ವಿದೇಶಿಯರನ್ನು ಬಂಧನದಲ್ಲಿರಿಸಲು, ಗಡೀಪಾರುಗೊಳಿಸಲು ಸಂವಿಧಾನದ 258(1) ಪರಿಚ್ಛೇಧ ಪ್ರಕಾರ 1958ನೇ ಇಸವಿ ಬಳಿಕದಿಂದ ರಾಜ್ಯಸರಕಾರಕ್ಕೂ ಅಧಿಕಾರವಿದೆ. ಎನ್ಆರ್ ಸಿಗೆ ಕಾನೂನು ಸಾಧ್ಯತೆ ನೀಡುವ 1955ರ ಪೌರತ್ವ ಕಾನೂನಿನ 14 ಎ ಕಲಂ 004ರ ನಂತರದ್ದಾಗಿದೆ. ಎನ್ಆರ್ ಸಿ ತಯಾರಿಸುವ ಪ್ರಕ್ರಿಯೆ, ಹೊಣೆಗಾರಿಕೆಗಳನ್ನು ಅದರಲ್ಲಿ ವಿವರಿಸಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.












