ಸನ್ಮಾರ್ಗ ವಾರ್ತೆ
ಕೊಲ್ಲಾಪುರ, ಮಾ. 20: ಮಹಾರಾಷ್ಟ್ರದಲ್ಲಿ ದ್ವಿಚಕ್ರ ಚಲಾಯಿಸುತ್ತಿದ್ದಾಗ ಸಾರ್ವಜನಿಕ ಸ್ಥಳದಲ್ಲಿ ಸೀನಿದ ಯುಕನಿಗೆ ಜನರ ಗುಂಪು ಪೆಟ್ಟು ಕೊಟ್ಟಿದೆ. ನಿನ್ನಿಂದಾಗಿ ಕೊರೊನಾ ಇತರರಿಗೆ ಹರಡುತ್ತದೆ ಎಂದು ಹೇಳಿ ಹೊಡೆದಿದ್ದಾರೆ. ಗುರುವಾರ ಸಂಜೆ ಕೊಲಾಪುರ ನಗರದ ಗುಜಾರಿಯಲ್ಲಿ ಘಟನೆ ನಡೆದಿದೆ. ಜನರ ಗುಂಪು ಹೊಡೆಯುವ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ದ್ವಿಚಕ್ರದಲ್ಲಿ ಹೋಗುವ ವ್ಯಕ್ತಿ ಟವೆಲ್ ಮೂಗಿಗೆ ಹಿಡಿಯದೆ ಸೀನಿದ್ದಾರೆ ಎಂದು ಆರೋಪಿಸಿ ಹೊಡೆದಿದ್ದಾರೆ. ರಸ್ತೆಯಲ್ಲಿ ಜನರ ಗುಂಪು ನೆರೆದೊಡನೆ ಟ್ರಾಫಿಕ್ ಜಾಮ್ ಆಗಿದೆ. ವ್ಯಕ್ತಿ ಪೊಲೀಸರಿಗೆ ದೂರು ನೀಡಿಲ್ಲ. ಮಹಾರಾಷ್ಟ್ರದಲ್ಲಿ 49 ಮಂದಿಗೆ ಇದುವರೆಗೆ ಕೊರೊನಾ ಇರುವುದು ದೃಢಪಟ್ಟಿದೆ.












