ಕೊರೊನಾ ನಿಯಂತ್ರಣದ ನಡುವೆಯೇ ಸಾಮೂಹಿಕ ಸೂರ್ಯ ನಮಸ್ಕಾರ: ಗೋವಾ ಸರಕಾರ ಮತ್ತು ರಾಮ್‍ ದೇವ್

0
684

ಸನ್ಮಾರ್ಗ ವಾರ್ತೆ

ಪಣಜಿ, ಮಾ. 23: ಕೊರೊನಾ ಪ್ರತಿರೋಧಿಸುವ ಅಂಗವಾಗಿ ದೇಶಾದ್ಯಂತ ನಿಯಂತ್ರಣಗಳು ಇರುವಂತೆಯೇ ವಿದ್ಯಾರ್ಥಿಗಳನ್ನು ಸೇರಿಸಿ ಸಾಮೂಹಿಕ ಸೂರ್ಯ ನಮಸ್ಕಾರಕ್ಕೆ ಬಾಬಾ ರಾಮದೇವ್ ತಯಾರಿ ನಡೆಸುತ್ತಿದ್ದಾರೆ. ಜಾಗತಿಕ ರೆಕಾರ್ಡ್ ಗುರಿಯಾಗಿಟ್ಟು ಗೋವಾ ಸರಕಾರ ಸಹಾಯದಲ್ಲಿ ಎಪ್ರಿಲ್ 20ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಟೈಮ್ಸ್ ಆಫ ಇಂಡಿಯ ವರದಿ ಮಾಡಿದೆ.

ಸಂಜೆ 3.30ರಿಂದ ಏಳು ಗಂಟೆಯವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಮಕ್ಕಳು ಭಾಗವಹಿಸುವಂತೆ ಮಾಡಬೇಕೆಂದು ಆಗ್ರಹಿಸಿ ರಾಜ್ಯ ಸರಕಾರ ಶಾಲೆಗಳಿಗೆ ಸರ್ಕ್ಯೂಲರ್ ಕಳುಹಿಸಿದೆ. ಕೊರೊನಾ ವ್ಯಾಪನದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಿದ ಪ್ರಕಟಣೆ ಹೊರಡಿಸಿದಂದೇ ಸೂರ್ಯ ನಮಸ್ಕಾರದ ಸರ್ಕ್ಯೂಲರ್ ಗೋವ ಸರಕಾರ ಕಳುಹಿಸಿದೆ. ಎಪ್ರಿಲ್ 20ಕ್ಕೆ ನಡೆಯುವ ಕಾರ್ಯಕ್ರಮಕ್ಕೆ ಎಪ್ರಿಲ್ 15ರಿಂದ ತರಬೇತಿ ನಡೆಯಲಿದೆ. ಎಷ್ಟು ಮಕ್ಕಳು ಭಾಗವಹಿಸುತ್ತಾರೆ ಎಂದು ಹೇಳಲಾಗದು. ಆದರೆ ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಕಾರ್ಯಕ್ರಮವನ್ನು ನೋಂದಣಿ ಮಾಡಲಾಗಿದೆ.