ಕೇರಳ: ಬಿಪಿಎಲ್ ಕುಟುಂಬಗಳಿಗೆ ಮನೆಮನೆಗೆ ಆಹಾರ ಕಿಟ್ ವಿತರಣೆ

0
2453

ಸನ್ಮಾರ್ಗ ವಾರ್ತೆ

ತಿರುವನಂತಪುಂರ, ಮಾ. 25: ಕೇರಳದಲ್ಲಿ ಎಲ್ಲ ಬಿಪಿಎಲ್ ಕುಟುಂಬಗಳಿಗೆ ಆಹಾರವಸ್ತು ವಿತರಿಸಲಾಗುವುದು. ಐದು ಕೆಜಿ ಅಕ್ಕಿ ಸಹಿತ ಒಂದು ತಿಂಗಳ ಆಹಾರ ವಸ್ತುಗಳು ಇದರಲ್ಲಿರಲಿವೆ. ಆದ್ಯತಾ ಪಟ್ಟಿಯಲ್ಲಿರುವವರಿಗೆ 15 ಕೆಜಿ ಅಕ್ಕಿ ವಿತರಿಸಲಾಗುವುದು. ಅಗತ್ಯವಾದರೆ ಇತರರಿಗೆ ನೀಡುವ ವಿಷಯವನ್ನೂ ಪರಿಗಣಿಸಲಾಗುವುದು. ಆಹಾರ ವಸ್ತುಗಳನ್ನು ಅವರ ಮನೆಗಳಿಗೆ ತಲುಪಿಸುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಸಚಿವ ಸಂಪುಟ ಸಭೆಯಲ್ಲಿ ಇದು ಪರಿಗಣನೆಗೆ ಬಂದಿದೆ. ರೇಶನ್ ಅಂಗಡಿಗಳು ಹೆಚ್ಚು ಸಮಯ ತೆರೆದಿರುತ್ತದೆ. ಬೆಳಗ್ಗೆ ಒಂಬತ್ತರಿಂದ ಒಂದು ಗಂಟೆಯವರೆಗೆ ಮಧ್ಯಾಹ್ನ ಎರಡು ಗಂಟೆಯಿಂದ ಐದು ಗಂಟೆಯವರೆಗೆ ರೇಶನ್ ಅಂಗಡಿ ತೆರೆದಿರುತ್ತದೆ.

ಕೇರಳ ಸಂಪೂರ್ಣ ಬಂದ್ ಆಗಿರುವ ನಿಟ್ಟಿನಲ್ಲಿ ಹೊಸ ತೀರ್ಮಾನಕ್ಕೆ ಕೇರಳ ಸರಕಾರ ಬಂದಿದೆ. ದಿನಗೂಲಿಗಳಿಗೆ ಕಷ್ಟ ಆಗಬಹುದು ಎಂದು ಈ ಕ್ರಮವನ್ನು ಸರಕಾರ ತೆಗೆದುಕೊಂಡಿದೆ.