ಸನ್ಮಾರ್ಗ ವಾರ್ತೆ
ಪ್ಯಾರಿಸ್, ಮಾ. 25: ಕೊರೊನಾ ಪೀಡಿತರಾಗಿದ್ದ ಪ್ರಸಿದ್ಧ ಆಫ್ರಿಕನ್ ಸಂಗೀತಜ್ಞ ಸ್ಯಾಕ್ಸ್ ಫೊನ್ ಕಲಾವಿದ ದಿಬಾಂಗೊ(86) ಮೃತಪಟ್ಟಿದ್ದಾರೆ. ಅವರು ಪ್ಯಾರಿಸ್ನಲ್ಲಿ ಕೊರೊನಕ್ಕೆ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಅವರು ಮೃತಪಟ್ಟಿರುವುದನ್ನು ಅವರದೇ ಫೇಸ್ಬುಕ್ ಪುಟದ ಮೂಲಕ ಕುಟುಂಬಗಳಿಗೆ ತಿಳಿಸಲಾಗಿದೆ. ಕೊರೊನಾ ಪೀಡಿತರಾದ ಪರಿಸ್ಥಿತಿಯಲ್ಲಿ ಮರಣದ ಬಳಿಕದ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದ್ದು ಪ್ರಸಕ್ತ ಕೊರೋನಾ ಭೀತಿ ಮುಗಿದ ಬಳಿಕ ಸ್ಮರಣಾರ್ಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
1972ರಲ್ಲಿ ಸೊಲ್ ಮಾಕೊಸ್ ಎಂಬ ಅಲ್ಬಂ ಮೂಲಕ ಅವರು ಪ್ರಸಿದ್ಧರಾಗಿದ್ದರು. ಜಾಸು ಪರಂಪರಾಗತ ಶೈಲಿಯ ಹಾಡುಗಳಿಂದ ದಿಬಾಂಗೊ ಹೆಚ್ಚು ಪ್ರಸಿದ್ಧಿ ಪಡೆದಿದ್ದರು.












