ಸನ್ಮಾರ್ಗ ವಾರ್ತೆ
ಮಂಗಳೂರು; ಮಾ. ಕೊರೋನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೀಡಾದವರಿಗೆ ಮಂಗಳೂರಿನ ವಿವಿಧ್ ಸಂಘಟನೆಗಳು ಮತ್ತು ವ್ಯಕ್ತಿಗಳು ಸಕಾಲದಲ್ಲಿ ತಲುಪಿ ಮಾನವೀಯತೆ ಮೆರೆಯುತ್ತಿದ್ದಾರೆ. ಸಾಲಿಡಾರಿಟಿ ಯೂತ್ ಮೂಮೆಂಟ್ ನ ಶೌಕತ್ ಅಲಿಯವರು ಜನತಾ ಕರ್ಫ್ಯುನಂದು ಆಹಾರ ಸಿಗದೇ ಕಷ್ಟಪಡುತ್ತಿದ್ದವರಿಗೆ ಆಹಾರ ತಯಾರಿಸಿ ಕೊಟ್ಟು ಮಾನವೀಯತೆ ಮೆರೆದ ಬಳಿಕ ಅದು ಭಾರೀ ಗಮನ ಸೆಳೆ ದಿತ್ತು. ಇದೀಗ ಸಂಘಟಿತ ಸೇವಾ ಚಟುವಟಿಕೆಗೆ ಪ್ರಾರಂಭವಾಗಿದೆ. ಮಂಗಳೂರಿನ ಕಂದಕ್ ಏರಿಯಾದಲ್ಲಿ ಯುವಕರ ತಂಡವು ಆಹಾರ ತಯಾರಿಸಿ ವಿತರಣೆ ಮಾಡುವ ಕಾಯಕದಲ್ಲಿ ನಿರತವಾಗಿದೆ. ಜನತಾ ಕರ್ಫ್ಯೂ ನಿಂದ ತೊಡಗಿ ಈವರೆಗೆ ಈ ಕಾಯಕ ಮುಂದುವರಿದಿದ್ದು, ಬಡವರ ಪಾಲಿಗೆ ಆಶಾ ದೀಪವಾಗಿದೆ. ಅಲ್ಲದೆ, ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿಯು ( ಹೆಚ್ ಆರ್ ಎಸ್ ) ದ ಕ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಇರುವ ತನ್ನ ಕಾರ್ಯಕರ್ತರ ಮೊಬೈಲ್ ಸಂಖ್ಯೆ ಮತ್ತು ಹೆಸರುಗಳನ್ನೂ ಸಾರ್ವಜನಿಕರಿಗೆ ಬಿಡುಗಡೆ ಮಾಡಿದ್ದು, ಅಗತ್ಯವಿರುವವರು ಸಂಪರ್ಕಿಸುವಂತೆ ಕೋರಿದೆ. ಅವರ ವಿವರ ಹೀಗಿದೆ-
ಮಂಗಳೂರು: ಅಮೀರ್ ಕುದ್ರೋಳಿ- 9035529541, ಇರ್ಷಾದ್ ಹಾಶ್ಮಿ- 9448696481, ಕಾಸಿಂ- 9901348883,
ಉಳ್ಳಾಲ: ಶಾಕಿರ್- 8904533856, ನಿಜಾಮ್- 9900712890
ಸುರತ್ಕಲ್: ಅಲ್ತಾಫ್- 7795862483
ಮುಲ್ಕಿ: ನಿಯಾಜ್- 9844014561
ಮೂಡಬಿದ್ರಿ: ಮುನೀರ್ ಪದರೆಂಗಿ- 9844612785,ಇಸ್ಮಾಯೀಲ್ ಷರೀಫ್- 8971042905
ಬಂಟ್ವಾಳ: ಸತ್ತಾರ್ ಗೂಡಿನಬಳಿ- 8971898206, ಸಿದ್ದೀಕ್ ಕಲ್ಲಡ್ಕ- 9449487069, ಇಕ್ಬಾಲ್- 8762636786
ಉಪ್ಪಿನಂಗಡಿ: ಅಲ್ತಾಫ್- 9481756251
ಪುತ್ತೂರು: ರಫೀಕ್- 9731460444
ಸುಳ್ಯ: ಅಶ್ರಫ್- 9449221457
ಸದ್ಯ ಹೆಚ್ ಆರ್ ಎಸ್ ನ ಕಾರ್ಯಕರ್ತರಾದ ಅಮೀರ್ ಕುದ್ರೋಳಿ, ಕಾಸಿಂ, ಮುನವ್ವರ್, ಇರ್ಷಾದ್ ಅವರು ಮಂಗಳೂರಿನಲ್ಲಿ ತೊಡಗಿಸಿಕೊಂಡಿದ್ದು, ಮುನ್ನ ಕಮ್ಮರಡಿ ಮತ್ತು ಬ್ಯಾರಿ ಝುಲ್ಫಿ ಮತ್ತು ಹಬೀಬ್ ಕಾದರ್ ಅವರ ತಂಡ ಇನ್ನೊಂದೆಡೆ ಕಾರ್ಯಾಚರಿಸುತ್ತಿದೆ. ಸಾಲಿಡಾರಿಟಿಯ ಶೌಕತ್ ಅಲಿ ಮತ್ತು ಶಬ್ಬೀರ್ ಮಂಗಳೂರು ಅವರ ತಂಡವೂ ನೆರವು ಕಾರ್ಯದಲ್ಲಿ ನಿರತವಾಗಿದೆ. ಇದೇವೇಳೆ, ಅಕ್ಬರಲಿ ಬಿ ಏ ಮತ್ತು ಅವರ ತಂಡವು ೧೦೦೦ ಕಂಟೇನರ್ ಮತ್ತು ನೀರಿನ ಬಾಟಲಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಉಳ್ಳಾಲದ ಜಮಾಅತೆ ಇಸ್ಲಾಮಿ ಹಿಂದ್ ನ ಸಮಾಜ ಸೇವಾ ಘಟಕವು ತನ್ನ ಕಾರ್ಯಕರ್ತರನ್ನು ಸೇವಾ ಕಾರ್ಯಕ್ಕೆ ಇಳಿಸಿದ್ದು, ನಿನ್ನೆ ಮಂಗಳವಾರ ಸುಮಾರು 40 ಬಡ ಕುಟುಂಬಗಳಿಗೆ ಜೀವನಾವಶ್ಯ ಆಹಾರ ವಸ್ತುಗಳನ್ನು ವಿತರಿಸಿದ್ದು, ಇವತ್ತು ಬುಧವಾರ ಸುಮಾರು 60 ಕುಟುಂಬಗಳಿಗೆ ಆಹಾರ ವಸ್ತುಗಳನ್ನು ಮನೆಮನೆಗೆ ತಲುಪಿಸಿದೆ. ಹಾಗೆಯೇ ಪೊಲೀಸ್ ವ್ಯವಸ್ಥೆ ಈ ಕೆಲಸಕ್ಕೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದು, ಯುವಕರನ್ನು ಹುರಿದುಂಬಿಸುತ್ತಿದೆ.
Posted by Shoukath Ali on Tuesday, March 24, 2020












