ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಮಾ. 25: ಭಾರತದಲ್ಲಿ ಇದುವರೆಗೆ 581 ಮಂದಿಗೆ ಕೊರೊನಾ ಇದೆ. ಇವರಲ್ಲಿ 40 ಮಂದಿ ರೋಗಮುಕ್ತರಾಗಿದಾರೆ. ಈಗ 512 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಇಂದು ಐದು ಮಂದಿಗೆ ರೋಗ ದೃಢಪಟ್ಟಿದೆ. ಇದರೊಂದಿಗೆ ಆ ರಾಜ್ಯದಲ್ಲಿ ರೋಗಪೀಡಿತ ಸಂಖ್ಯೆ 112 ಆಗಿದೆ. ಗುಜರಾತ್ನಲ್ಲಿ ಮೂರು, ಬಿಹಾರದಲ್ಲಿ ಒಂದು ಕೊರೊನಾ ಪೋಸೆಟಿವ್ ಪ್ರಕರಣಗಳು ವರದಿಯಾಗಿವೆ.
ತಮಿಳ್ನಾಡಿನ ಮಧುರೆಯಲ್ಲಿ 54 ವರ್ಷದ ವ್ಯಕ್ತಿ ಕೊರೊನಾ ಪೀಡಿತರಾಗಿ ಮೃತಪಟ್ಟಿದ್ದಾರೆ. ಭಾರತದಲ್ಲಿ ಮೃತರ ಸಂಖ್ಯೆ 11ಕ್ಕೇರಿಕೆಯಾಗಿದೆ. ವೈರಸ್ ಹರಡುವಿಕೆಯನ್ನು ತಡೆಯುವುದಕ್ಕಾಗಿ 21 ದಿವಸ ಲಾಕ್ ಡೌನ್ ಘೋಷಣೆಯಾಗಿದೆ.












