
ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 25: ಕೊರೊನಾ ವೈರಸ್ ಹೊಸ ಪ್ರಕರಣಗಳು ಬರುತ್ತಿವೆ. ಈಗಲೂ ಅಪಾಯ ಶಮನಗೊಂಡಿಲ್ಲ. ಆದ್ದರಿಂದ ಜನರು ತುಂಬ ಎಚ್ಚರ ವಹಿಸಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಅಂತೂ ಕೊರೊನಾ ದ ಕುರಿತು ತುಂಬ ವದಂತಿಗಳು ಹಬ್ಬಿಯಾಗಿವೆ. ನೋಟಿನಿಂದಲೂ ಕೊರೊನಾ ಹಬ್ಬುತ್ತದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲಾಗುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಇದಕ್ಕೆ ಮಾರ್ಗಸೂಚಿ ಮಾಡಿದೆ. ಹಣ ಕೊಡುವ ಪಡೆಯುವ ಮೊದಲು ಕೈಯನ್ನು ಸೆನೆಟೈಝ್ ಮಾಡಬೇಕೆಂದು ಅದು ಹೇಳುತ್ತಿದೆ.
ಆರ್ ಬಿ ಐ ಏನನ್ನುತ್ತಿದೆ ನೋಡೊಣ:
ಈಗ ಕ್ಯಾಶ್ ನ ಬದಲು ಜನರು ಡಿಜಿಟಲ್ ಮಾಧ್ಯಮವನ್ನು ಬಳಸಿರಿ, ಇದರಿಂದ ಕರೋನಾ ಅಪಾಯದಿಂದ ಪಾರಾಗುವ ಸಾಧ್ಯತೆ ಇದೆ. ಓರ್ವ ಸಲಹೆಕಾರರು ರಿಸರ್ವ್ ಬ್ಯಾಂಕ್ ಹೇಳಿದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಹೇಳುತ್ತಾರೆ. ಯಾಕೆಂದರೆ ಕೊರೊನಾ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತಿದೆ. ನೀವು ನಗದು ಲೆನದೇನಾ ಮಾಡುವುದಾದರೆ ರೋಗಿ ವ್ಯಕ್ತಿಯಿಂದ ಆರೋಗ್ಯ ವಂತ ವ್ಯಕ್ತಿಗೆ ವೈರಸ್ ಹರಡುವ ಸಾಧ್ಯತೆ ಇದೆ. ಆದ್ದರಿಂದ ನಗದು ಬಳಕೆಯಿಂದ ದೂರ ಇರಿ.
ನಗದು ವಹಿವಾಟಿನಲ್ಲಿ ಕೊರೊನಾ ಅಪಾಯ ಹೆಚ್ಚು ಇದೆ. ಶೀತ, ಜ್ವರ, ಸೀನುವುದು ಸಮಸ್ಯೆ ಇದ್ದವರಲ್ಲಿ ವೈರಸ್ ನೋಟಿಗೆ ತಗಲಿ ಅದನ್ನು ತೆಗೆದುಕೊಳ್ಳುವ ವ್ಯಕ್ತಿಯನ್ನು ಪ್ರವೇಶಿಸಬಹುದು. ಆದ್ದರಿಂದ ಡಿಜಿಟಲ್ ಆಗಿ ಹಣ ಕೊಡಲು ಯತ್ನಿಸಿರಿ. ಯಾವುದೇ ಅಂಗಡಿಯವ, ವ್ಯಕ್ತಿಗಳಿಂದ ಹಣ ಪಡೆಯುವುದು ಅಗತ್ಯವೆಂದಾದರೆ ಕೈಯನ್ನು ಆಗ ಸ್ಯಾನೆಟಾಯಿಸ್ ಮಾಡಿರಿ . ಹೆಚ್ಚು ಜನರು ಇರುವ ಎಟಿಎಂನಿಂದ ಹಣ ಡ್ರಾ ಮಾಡ್ಬೇಡಿರಿ.











