ಸನ್ಮಾರ್ಗ ವಾರ್ತೆ
ನ್ಯೂಯಾರ್ಕ್, ಮಾ. 27: ಜಗತ್ತಿನಲ್ಲಿ ಅತಿ ಹೆಚ್ಚು ಕೊರೊನ ಇರುವ ದೇಶಗಳಲ್ಲಿ ಅಮೇರಿಕ ಮೂರನೇ ಸ್ಥಾನಕ್ಕೆ ನೆಗೆದಿದೆ. ಇಲ್ಲಿ 86,197 ಮಂದಿಗೆ ರೋಗ ದ್ರಢಪಟ್ಟಿದೆ. ರೋಗ ಪೀಡಿತರ ಸಂಖ್ಯೆಯಲ್ಲಿ ಚೀನಾ ಇಟಲಿಯನ್ನು ಹಿಂದಿಕ್ಕಿ ಮುಂದೆ ಸಾಗಿದೆ. 24 ಗಂಟೆಗಳಲ್ಲಿ ಅಮೇರಿಕಾದಲ್ಲಿ 17,224 ಮಂದಿಗೆ ಕೊರೋನಾ ದ್ರಢ ಪಟ್ಟಿದ್ದು ಇದುವರೆಗೆ 1300 ಮಂದಿ ಮೃತ ಪಟ್ಟಿದ್ದಾರೆ.
ವಿಶ್ವಾದ್ಯಂತ ಹರಡುತ್ತಿರುವ ಕೊರೋನದ ಮುಂದಿನ ಆಘಾತ ಕೇಂದ್ರ ಅಮೇರಿಕ ಎಂದು ವಿಶ್ವ ಅರೋಗ್ಯ ಸಂಸ್ಥೆ ಮುನ್ನೆಚ್ಚರಿಕೆ ನೀಡಿತ್ತು. ನ್ಯೂಯಾರ್ಕ್ ನಲ್ಲಿ ಹೆಚ್ಚು ಕರೋನಾ ಪೀಡಿತರಿದ್ದು ಚೀನಾದಲ್ಲಿ ೮೧,೨೮೫ ಮಂದಿ ಇದ್ದಾರೆ. ವೈರಸ್ ಪೀಡಿತರಾಗಿ ಇಟಲಿಯಲ್ಲಿ ಅತಿ ಹೆಚ್ಚು ಜನರು ಮೃತ ಪಟ್ಟಿದ್ದಾರೆ. ಇಲ್ಲಿ 80,589 ಮಂದಿ ಕೊರೋನಾ ಪೀಡಿತರು ಇದ್ದಾರೆ.
ಅಮೆರಿಕದಲ್ಲಿ ಶೇ. 40 ರಷ್ಟು ಪ್ರದೇಶಗಳು ಲಾಕ್ ಡೌನ್ ನಲ್ಲಿವೆ. ಆದರೆ ದೇಶದಾದ್ಯಂತ ಸಂಪೂರ್ಣ ಲಾಕ್ ಡೌನ್ ಸಾಧ್ಯತೆ ಇಲ್ಲ ಎಂದು ಡೊನಾಲ್ಡ್ ಟ್ರಾಂಪ್ ಹೇಳುತ್ತಿದ್ದಾರೆ. ಜನರು ಸಾಮಾಜಿಕ ಅಂತರವನ್ನು ಪಾಲಿಸಬೇಕು. ಮನೆಯಲ್ಲಿ ಇರಬೇಕೆಂದು ಟ್ರಂಫ್ ಹೇಳಿದ್ದಾರೆ.












