ಹಣ್ಣು ಹಂಪಲು,ತರಕಾರಿ ವಿತರಣೆ ಖಚಿತ ಪಡಿಸಬೇಕು-ಕೇಂದ್ರ ಕೃಷಿ ಇಲಾಖೆ

0
784

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 27: ಹಣ್ಣು, ತರಕಾರಿಯಂತಹ ಅಗತ್ಯ ವಸ್ತುಗಳ ವಿತರಣೆಯನ್ನು ಖಚಿತ ಪಡಿಸಬೇಕೆಂದು ಕೇಂದ್ರ ಕೃಷಿ ಇಲಾಖೆ ತಿಳಿಸಿದೆ. ದೇಶದಲ್ಲಿ 1600 ವಿತರಣಾ ಸಂಸ್ಥೆಗಳು ಇವೆ. ಇನ್ನೂ 300 ಶುಕ್ರವಾರ ಆರಂಭವಾಗಲಿದೆ ಎಂದು ಕೃಷಿ ಅಧಿಕಾರಿಯನ್ನು ಉದ್ಧರಿಸಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಲಾಕ್ಡೌನ್ ಎರಡು ದಿವಸವಾದಾಗ ಅಗತ್ಯ ವಸ್ತುಗಳ ವಿತರಣೆ ಸ್ಥಗಿತವಾಗುತ್ತದೆ ಎಂಬ ಆತಂಕ ಸೃಷ್ಟಿಯಾಗಿತ್ತು. ಇದನ್ನು ಪರಿಹರಿಸಲು ತುರ್ತು ಮಧ್ಯಪ್ರವೇಶ ಅಗತ್ಯ. 1600 ಸಗಟು ವಿತರಣೆ ಸಂಸ್ಥೆಗಳು ಗುರುವಾರ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿವೆ ಎಂದು ಕೇಂದ್ರ ಸರಕಾರ ತಿಳಿಸಿದೆ. 300 ಹೊಸದಾಗಿ ಆರಂಭವಾದರೆ ಈಗಿನ ಆತಂಕ ದೂರವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಣ್ಣು, ತರಕಾರಿ ವಿತರಣೆ ಖಚಿತಪಡಿಸುವುದಕ್ಕೆ ರಾಜ್ಯ ಸರಕಾರಗಳೊಂದಿಗೆ ರಾಜ್ಯದ ಏಜೆನ್ಸಿಗಳೊಂದಿಗೂ ಕೃಷಿ ಇಲಾಖೆ ನಿರಂತರ ಸಂಪರ್ಕ ಇರಿಸಿಕೊಂಡಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ.