ಶ್ರೀನಗರದಲ್ಲಿ ಎಂಟು ತಿಂಗಳ ಮಗುವಿಗೂ ಕೊರೊನಾ

0
610

ಸನ್ಮಾರ್ಗ ವಾರ್ತೆ

ಶ್ರೀನಗರ, ಮಾ. 27: ಶ್ರೀನಗರದಲ್ಲಿಎಂಟು ತಿಂಗಳ ವಯಸ್ಸಿನ ಮಗುವಿಗೂ ಕೊರೊನಾ ದೃಢವಾಗಿದ್ದು ಬಹುಶಃ ದೇಶದಲ್ಲೇ ಅತೀ ಚಿಕ್ಕ ವಯಸ್ಸಿನ ಕೊರೊನಾ ಪೀಡಿತ ರೋಗಿ ಈ ಮಗು ಎಂದು ವರದಿಯಾಗಿದೆ. ಇದು ಸಹಿತ ಗುರುವಾರ ಎರಡು ಕೊರೊನಾ ಪ್ರಕರಣಗಳು ಜಮ್ಮು ಕಾಶ್ಮೀರದಲ್ಲಿ ದೃಢಪಟ್ಟಿದ್ದು ಇದೇ ಮಗುವಿನ ಏಳು ವರ್ಷದ ಸಹೋದರನೂ ಕೊರೊನಾ ಪೀಡಿತನಾಗಿದ್ದಾನೆ.

ಇತ್ತೀಚೆಗೆ ಸೌದಿ ಅರೇಬಿಯದಿಂದ ಬಂದಿದ್ದ ವ್ಯಕ್ತಿಯ ಮೊಮ್ಮಕ್ಕಳು ಇವರು. ಈ ವ್ಯಕ್ತಿಗೆ ಕಳೆದ 24 ನೇ ತಾರೀಕಿಗೆ ಕೊರೊನಾ ಇರುವುದು ದೃಢವಾಗಿತ್ತು. ಜಮ್ಮು ಕಾಶ್ಮೀರದಲ್ಲಿ ಈವರೆಗೆ ಹನ್ನೊಂದು ಕೊರೊನಾ ಪ್ರಕರಣಗಳು ದೃಢಗೊಂಡಿವೆ ಎಂದು ವರದಿ ತಿಳಿಸಿದೆ.