ಕೈಯಲ್ಲಿ ಹಣ ಇಲ್ಲ, ಸರಕಾರೀ ನೆರವೂ ಲಭ್ಯವಿಲ್ಲ: ಅರುಣಾಚಲದಿಂದ ಅಸ್ಸಾಮ್ ಗೆ ನಡೆಯತೊಡಗಿದ ಕುಟುಂಬ

0
570

ಸನ್ಮಾರ್ಗ ವಾರ್ತೆ

ನವದೆಹಲಿ ಏಪ್ರಿಲ್ 17- ರಾಷ್ಟ್ರವ್ಯಾಪಿ ಲಾಕ್ ಡೌನ್ ಗೆ ತಿಂಗಳು ತುಂಬಿದ ಈ ಹೊತ್ತಿನಲ್ಲಿ ವಲಸೆ ಕಾರ್ಮಿಕರು ಕೈಯಲ್ಲಿ ಹಣವೂ ಇಲ್ಲದೆ ತಾವಿರುವ ಪ್ರದೇಶದಲ್ಲಿ ಆಹಾರ ವಿತರಣೆಯೂ ನಡೆಯದೆ ತಮ್ಮೂರಿಗೆ ಪ್ರಯಾಣ ಹೊರಡುವ ಎರಡನೇ ಹಂತ ಪ್ರಾರಂಭವಾಗಿದೆ.

ಅರುಣಾಚಲ ಪ್ರದೇಶದ ಒಂದು ಕುಟುಂಬ ಅಸ್ಸಾಮಿನಲ್ಲಿರುವ ತನ್ನೂರಿಗೆ ಹೊರಟ ಕಥೆಯನ್ನು ಎನ್ ಡಿಟಿವಿ ವರದಿ ಮಾಡಿದೆ. 38 ವರ್ಷದ ಸಲ್ಮಾನ್ ದರ್ಜಿ ತನ್ನಿಬ್ಬರು ಮಕ್ಕಳು ಮತ್ತು ಪತ್ನಿಯ ಜೊತೆಗೆ ತನ್ನೂರಿಗೆ ಹೊರಟಿರುವುದನ್ನು ಅದು ವರದಿ ಮಾಡಿದೆ. ಕೂಲಿ ಕಾರ್ಮಿಕರಾದ ಇವರಿಗೆ ಸರಕಾರದ ವತಿಯಿಂದ ಆಹಾರ ಸೌಲಭ್ಯಗಳು ದೊರಕದೆ ಹೋದಾಗ ಬೇರೆ ದಾರಿಯಿಲ್ಲದೆ ಪತ್ನಿ ಮತ್ತು ಮಗುವನ್ನು ಕರೆದುಕೊಂಡು ಸಲ್ಮಾನ್ ದರ್ಜಿ ಇಟಾನಗರಕ್ಕೆ ಹೊರಟಿದ್ದಾರೆ.

ಇನ್ನು ಐದಾರು ಗಂಟೆಗಳ ಕಾಲ ನಡೆದರೆ ನಮ್ಮೂರಿಗೆ ತಲುಪಬಹುದೆಂದು ಎಂದು ಸಲ್ಮಾನ್ ಹೇಳಿದ್ದನ್ನು ಎನ್ಡಿಟಿವಿ ವರದಿ ಮಾಡಿದೆ. ಈಗಾಗಲೇ 6 ಗಂಟೆಗಿಂತ ಹೆಚ್ಚಿನ ಅವಧಿಯನ್ನು ಇವರು ನಡೆದು ಸಾಗಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕುಟುಂಬಗಳು ಕಾಡುದಾರಿಯ ಮೂಲಕ ಅರುಣಾಚಲದಿಂದ ಹೊರಬಂದು ಆ ಬಳಿಕ ಹೆದ್ದಾರಿಯಲ್ಲಿ ನಡೆಯುವ ಸಾಹಸಕ್ಕೆ ಇಳಿದಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.