ಸನ್ಮಾರ್ಗ ವಾರ್ತೆ
ಮೈಸೂರು, ಏಪ್ರಿಲ್ 18- ಇಲ್ಲಿನ ನಂಜನಗೂಡಿನ ಔಷಧ ಕಾರ್ಖಾನೆಯವರ ಮೇಲೆ ಕೊರೋನಾ ತೀವ್ರವಾಗಿ ಎರಗಿದ್ದು, ಒಟ್ಟು ಮೈಸೂರಿನ 73 ಕೊರೋನಾ ಪಾಸಿಟಿವ್ ಪ್ರಕರಣಗಳ ಪೈಕಿ 60 ಮಂದಿ ಈ ಔಷಧ ಕಾರ್ಖಾನೆಯ ನೌಕರರೇ ಆಗಿರುವುದು ಕಳವಳಕ್ಕೆ ಕಾರಣವಾಗಿದೆ.
ಶುಕ್ರವಾರ ಕೊರೋನಾ ದೃಢಪಟ್ಟ 12 ಮಂದಿಯಲ್ಲಿ 11 ಮಂದಿ ನಂಜನಗೂಡಿನ ಔಷಧ ಕಾರ್ಖಾನೆಯ ನೌಕರರಾಗಿದ್ದಾರೆ. ಮೈಸೂರಿನಲ್ಲಿ ಒಟ್ಟು ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 73ಕ್ಕೆ ಏರಿದೆ. ಇದೇವೇಳೆ, ಮೈಸೂರಿನ ಹತ್ತು ಬಡಾವಣೆಗಳನ್ನು ಈಗಾಗಲೇ ನಿರ್ಬಂಧಿತ ವಲಯವೆಂದು ಘೋಷಿಸಲಾಗಿದೆ ಮತ್ತು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಶುಕ್ರವಾರ ಕೊರೋನಾ ಪಾಸಿಟಿವ್ ಆದ ನಂಜನಗೂಡಿನ ಔಷಧ ಕಾರ್ಖಾನೆಯ 11 ಮಂದಿಗೂ ಮೊದಲ ಪೀಡಿತ ವ್ಯಕ್ತಿಯಿಂದಲೇ ಸೋಂಕು ತಗಲಿದೆ ಎಂದು ವೈದ್ಯಕೀಯ ವರದಿಯಲ್ಲಿ ದಾಖಲಾಗಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












