ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಎ. 18: ಕೊರೊನಾ ಪ್ರತಿರೋಧದ ಅಂಗವಾಗಿ ನಿಲ್ಲಿಸಲಾಗಿದ್ದ ಟೋಲ್ ಸಂಗ್ರಹವನ್ನು ಎಪ್ರಿಲ್ 20ರ ನಂತರ ಮತ್ತೆ ಆರಂಭಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೀರ್ಮಾನಿಸಿದೆ. ಮೇ ಮೂರರವರೆಗೆ ಲಾಕ್ ಡೌನ್ ಇದ್ದರೂ ಸೋಮವಾರದಿಂದ ಟೋಲ್ ಸಂಗ್ರಹ ಕಾರ್ಯಕ್ಕೆ ಪುನಃ ಚಾಲನೆ ನೀಡಲಾಗುವುದು.
ಟೋಲ್ ಸಂಗ್ರಹಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಇದರಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅನುಭವಿಸುತ್ತಿರುವ ನಷ್ಟದ ಪ್ರಮಾಣ ತಗ್ಗಬಹುದು, ಆರ್ಥಿಕ ಅಡಚಣೆಗಳನ್ನು ಪರಿಹರಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೋಮವಾರದಿಂದ ಟೋಲ್ ಗೇಟ್ ಆರಂಭಗೊಳ್ಳಲಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












