ಇಸ್ಲಾಮೊಫೋಬಿಯ ಹರಡುವುದನ್ನು ನಿಲ್ಲಿಸಿ: ಪ್ರಧಾನಿ ಮೋದಿಯನ್ನು ಆಗ್ರಹಿಸಿದ ಇಸ್ಲಾಮಿಕ್ ದೇಶಗಳು

0
1785

ಸನ್ಮಾರ್ಗ ವಾರ್ತೆ

ಜಿದ್ದ, ಎ. 20: ಕೊರೊನಾ ಹಿನ್ನೆಲೆಯಲ್ಲಿ ಭಾರತದಲ್ಲಿ ನಡೆಯುತ್ತಿರುವ ಇಸ್ಲಾಮೊಫೋಬಿಯ ಬೆಳೆಸುವ ಯೋಜನಾ ಬದ್ಧ ಯತ್ನಗಳ ವಿರುದ್ಧ ಆರ್ಗನೈಝೇಶನ್ ಆಫ್ ಇಸ್ಲಾಮಿಕ್ ಕೋ ಆಪರೇಷನ್ (ಒಐಸಿ) ಪ್ರತಿಭಟನೆ ವ್ಯಕ್ತಪಡಿಸಿದೆ.

ಒಐಸಿಯ ಮಾನವಹಕ್ಕು ವಿಭಾಗ ಐ ಪಿ ಎಚ್ ಆರ್ ಸಿಯು ತನ್ನ ಪ್ರತಿಭಟನೆಯನ್ನು ಭಾರತ ಸರಕಾರಕ್ಕೆ ತಿಳಿಸಿದೆ. ಕೊರೊನಾದ ಹಿನ್ನೆಲೆಯಲ್ಲಿ ಭಾರತದಲ್ಲಿ ಮಾಧ್ಯಮಗಳು ಕೆಟ್ಟ ರೀತಿಯಲ್ಲಿ ಮುಸ್ಲಿಮರನ್ನು ಚಿತ್ರಿಸುತ್ತಿವೆ. ಇಲ್ಲಿನ ಮಾಧ್ಯಮಗಳು ಮುಸ್ಲಿಮರ ವಿರುದ್ಧ ತಾರತಮ್ಯ ದಾಳಿಗಳನ್ನು ನಡೆಸುತ್ತಿವೆ ಎಂದು ಒಐಸಿಯ ಮಾನವಹಕ್ಕು ವಿಭಾಗ ಹೇಳಿದೆ.

ಈ ಪರಿಸ್ಥಿತಿಯಲ್ಲಿ ಭಾರತದ ಮುಸ್ಲಿಮ್ ಅಲ್ಪಸಂಖ್ಯಾತರ ಹಕ್ಕುಗಳನ್ನು ಸಂರಕ್ಷಿಸಲು ಸರಕಾರ ತುರ್ತಾಗಿ ಮಧ್ಯಪ್ರವೇಶಿಸಬೇಕೆಂದು ಐಪಿಎಚ್‍ಆರ್ ಸಿ ಆಗ್ರಹಿಸಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.