ಸನ್ಮಾರ್ಗ ವಾರ್ತೆ
ಭಾರತದಲ್ಲಿ ಕೊರೊನಾ ವೈರಸ್ ತೀವ್ರಗತಿಯಿಂದ ಹಬ್ಬುತ್ತಿದೆ. ತಜ್ಞರ ಪ್ರಕಾರ ವಾತಾವರಣದಲ್ಲಿ ಉಷ್ಣತೆ ಹೆಚ್ಚಿದರೆ ವೈರಸ್ ಕಡಿಮೆಯಾಗಬಹುದು. ಆದರೆ ಸಂಪೂರ್ಣ ನಾಶವಾಗದು. ಇತ್ತೀಚೆಗಿನ ಒಂದು ವರದಿಯ ಪ್ರಕಾರ ಉಷ್ಣತೆ ಹೆಚ್ಚಿದರೂ ಕೊರೊನಾ ವೈರಸ್ ಸಾಯುವುದಿಲ್ಲ ಎಂದು ತಿಳಿದು ಬಂದಿದೆ. ಫ್ರಾನ್ಸಿನ ವೈದ್ಯರ ಒಂದು ತಂಡದ ಅಧ್ಯಯನ ಪ್ರಕಾರ ಈ ವೈರಸ್ ಹೈಟೆಂಪರೇಚರ್ ನಲ್ಲಿಯೂ ತುಂಬ ಸಮಯ ಸಕ್ರಿಯವಾಗಿ ಇರಬಲ್ಲುದು. ವೈರಸ್ಸನ್ನು 6 0ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಪರೀಕ್ಷ ಮಾಡಲಾಗಿತ್ತು. ಇದರಿಂದ ಇಷ್ಟು ಉಷ್ಣತೆಯಲ್ಲಿ ವೈರಸ್ ಜೀವಂತವಾಗಿ ಇರುವುದು ಕಂಡು ಬಂದಿದೆ. ಉಷ್ಣತೆಯಲ್ಲಿಯೂ ಇದು ರೋಗವನ್ನು ಹರಡಬಲ್ಲುದು. ಭಾರತದಲ್ಲಿ ಈಗ ಉಷ್ಣತೆ ಕೆಲವು ಕಡೆ ಐವತ್ತು ಡಿಗ್ರಿಯವರೆಗೂ ಇದೆ ಎನ್ನಲಾಗುತ್ತದೆ.
ವಿಜ್ಞಾನಿಗಳು ಆಫ್ರಿಕದಲ್ಲಿ ಕಂಡು ಬರುವ ಕೋತಿಗಳ ಕೋಶಗಳನ್ನು ಸಂಗ್ರಹಿಸಿ ವೈರಸನ್ನು ಎರಡು ಪ್ರತ್ಯೇಕ ಟ್ಯೂಬ್ನಲ್ಲಿ ತುಂಬಿ ಎರಡು ಬೇರೆ ಬೇರೆ ರೀತಿಯ ವಾತಾವರಣದಲ್ಲಿ ಇಟ್ಟು ನೋಡಿದ್ದು ಈ ತೀರ್ಮಾನಕ್ಕೆ ಬಂದಿದ್ದಾರೆ ಎಂದು ವರದಿ ತಿಳಿಸಿದೆ.
ಪರೀಕ್ಷೆಯ ಬಳಿಕ ಶುದ್ಧ ವಾತಾವರಣದಲ್ಲಿ ಇಟ್ಟಿದ್ದ ವೈರಸ್ ಹೈ ಟೆಂಪರೇಚರ್ ನಲ್ಲಿ ನಿಷ್ಕ್ರಿಯವಾಗಿತ್ತು. ಕೊಳಕು ವಾತಾವರಣದಲ್ಲಿಟ್ಟಿದ್ದ ವೈರಸ್ ಸಕ್ರಿಯವಾಗಿತ್ತು. ಹೈಟೆಂಪರೇಚರಿನಲ್ಲಿ ವೈರಸ್ ಸ್ವಲ್ಪ ದುರ್ಬಲವಾಗಿದೆ, ಆದರೆ ನಾಶವಾಗಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಆದ್ದರಿಂದ ಶುಚಿತ್ವದತ್ತ ಹೆಚ್ಚು ಗಮನಹರಿಸುವುದು ಮುಖ್ಯವಾಗಿದೆ. ಸರಕಾರದ ಸಲಹೆ ಸೂಚನೆಗಳನ್ನು ಪಾಲಿಸುವುದು ಮತ್ತು ಸ್ವಯಂ ಐಸೊಲೇಶನ್, ಸಾಮಾಜಿಕ ಅಂತರ, ಮನೆಯಿಂದ ಹೊರಗೆ ಹೊರಡದಿರುವುದು, ಮನೆಯಲ್ಲಿ ಕುಟುಂಬ ಸಮೇತ ಹೋಮ್ ಕ್ವಾರಂಟೈನ್ ಮಾಡುವುದು ರೋಗದಿಂದ ದೂರವಿರಲು ಸಹಾಯಕವಾಗಲಿದೆ. ಕೈಯನ್ನು ಆಗಾಗ ತೊಳೆಯುತ್ತಿರುವುದು, ಸ್ಯಾನಿಟೈಝರ್ ಬಳಸುವುದು, ಜನನಿಭಿಡತೆ ಇದ್ದಲ್ಲಿಗೆ ಹೋಗದಿರುವುದು ಇತ್ಯಾದಿ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದು ಕೊರೊನಾ ತಡೆಗಟ್ಟಲು ಅನಿವಾರ್ಯವಾಗಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












