ಸನ್ಮಾರ್ಗ ವಾರ್ತೆ
ಗುವಾಹಟಿ, ಎ.20: ಲಾಕ್ ಡೌನ್ನಿಂದಾಗಿ ಅರುಣಾಚಲ ಪ್ರದೇಶದಲ್ಲಿ ಆಹಾರ ವಸ್ತುಗಳು ಗಾಮಗಳಿಗೆ ತಲುಪದಿರುವ ಹಿನ್ನೆಲೆಯಲ್ಲಿ ಗ್ರಾಮದ ಯುವಕರು ಅರಣ್ಯ ಜೀವಿಗಳನ್ನು ಬೇಟೆಯಾಡತೊಡಗಿದ್ದಾರೆ. ಹೀಗೆ ಬೇಟೆಯಾಡಿ ಸಿಕ್ಕಿದ ಹನ್ನೆರಡು ಅಡಿ ಉದ್ದದ ಕಾಳಿಂಗ ಸರ್ಪದೊಂದಿಗೆ ಯುವಕರು ನಿಂತ ವೀಡಿಯೊ ಕಳೆದ ದಿವಸ ಹೊರಬಂದಿದೆ. ಹಾವನ್ನು ಕೊಂದು ಶುಚಿಮಾಡಿ ಬೇಯಿಸಲು ಸಿದ್ಧತೆ ಮಾಡುವುದು ವೀಡಿಯೊದಲ್ಲಿದೆ. ಲಾಕ್ ಡೌನ್ನಿಂದ ಕೆಲಸಕ್ಕೆ ಹೋಗಲು ಆಗಿಲ್ಲ. ಮನೆಯಲ್ಲಿದ್ದ ಆಹಾರ ಧಾನ್ಯಗಳು ಮುಗಿಯುತ್ತಿದ್ದಂತೆಯೇ ಯುವಕರು ಕಾಡಿಗೆ ಬೇಟೆಗೆ ತೆರಳಿದ್ದಾರೆ. ಹಾವನ್ನು ಹಿಡಿದು ಅಡುಗೆ ಮಾಡಿದ ಯುವಕರ ವಿರುದ್ಧ ಅರಣ್ಯ ಜೀವಿ ಸಂರಕ್ಷಣಾ ಕಾನೂನು ಪ್ರಕಾರ ಕೇಸು ದಾಖಲಿಸಿಕೊಳ್ಳಲಾಗಿದೆ. ಆದರೆ ಇವರು ಭೂಗತರಾಗಿದ್ದಾರೆ.
ಕಾಳಿಂಗ ಸರ್ಪ ವಂಶನಾಶದ ಭೀತಿ ಎದುರಿಸುತ್ತಿದೆ. ಆದ್ದರಿಂದ ಅದನ್ನು ಕೊಲ್ಲುವುದು ಜಾಮೀನಿಲ್ಲದ ಅಪರಾಧವಾಗಿದೆ. ವಂಶನಾಶ ಎದುರಿಸುತ್ತಿರುವ ಧಾರಾಳ ಹಾವುಗಳಿರುವ ಪ್ರದೇಶ ಅರುಣಾಚಲವಾಗಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












