ಸನ್ಮಾರ್ಗ ವಾರ್ತೆ
ಬೆಂಗಳೂರು, ಎ. 20: ಲಾಕ್ ಡೌನ್ನಲ್ಲಿ ಮನೆ ಮನೆಗೆ ಆರ್ಡರ್ ಮಾಡಿ ಆಹಾರ ತಲುಪಿಸುವ ಮರೆಯಲ್ಲಿ ಗಾಂಜಾ ವಿತರಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿ ಸಹಿತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಫುಡ್ ಡೆಲಿವರಿ ಜೊತೆಗೆ ಯುವಕರಿಗೆ ಗಾಂಜಾ ಮಾರಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ತಾವರೆಕೆರೆ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಇವರು ಸಿಕ್ಕಿಬಿದ್ದಿದ್ದಾರೆ. ಐವರು ಬೈಕಿನಲ್ಲಿ ಬಂದಿದ್ದರು. ಈ ವೇಳೆ ಒಬ್ಬಾತ ತಪ್ಪಿಸಿಕೊಂಡಿದ್ದಾನೆ. ಭುವನೇಶ್ವರ ನಗರದ ಪಿ. ಮಧು ನಾಯಿಡು(19), ಬನಶಂಕರಿಯ ಎನ್ ಶರತ್ (22), ದಾಸನಪುರದ ಧನಂಜಯ(19), ಭಗೀರಥಿ ನಗರದ ಎಂ. ಶರತ್ ಸಿಕ್ಕಿಬಿದ್ದಿದ್ದಾರೆ. ತಮಗೆ ನಾಗಮಂಗಲದ ಝೈದ್ ಎಂಬಾತನಿಂದ ಗಾಂಜ ಸಿಕ್ಕಿದೆ ಎಂದು ಬಂಧಿತರು ತಿಳಿಸಿದ್ದಾರೆ. . ನಾಯಿಡು ಮತ್ತು ಶರತ್ ಫೂಡ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ.
ಬೆಂಗಳೂರಿನ ಎರಡನೆ ವರ್ಷ ಇಂಜಿನಿಯರಿಂಗ್ ವಿದ್ಯಾರ್ಥಿ ಶರತ್., ಧನಂಜಯ್ ಸಿಸಿಟಿವಿ ಟೆಕ್ನಿಷಿಯನ್, ಬೈಕ್ನಲ್ಲಿ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡವನು ಪವನ್, ಇವರಿಗೆ ಗಾಂಜಾ ಕೊಟ್ಟ ಝೈದ್ರಿಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. 50,000 ರೂಪಾಯಿ ಮೌಲ್ಯದ 960 ಗ್ರಾಮ್ ಗಾಂಜಾ, ಒಂದು ಬೈಕ್, ಮೂರು ಮೊಬೈಲ್ ಫೋನ್ 700 ರೂಪಾಯಿಯನ್ನು ಪೊಲೀಸರು ವಶಪಡಿಸಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












