ತೆಲಂಗಾಣದಲ್ಲಿ ಮೇ7ರವರೆಗೆ ಲಾಕ್ ಡೌನ್: ಪೊಲೀಸರ ಸಂಬಳ ವೃದ್ಧಿ – ಮುಖ್ಯಮಂತ್ರಿ

0
579

ಸನ್ಮಾರ್ಗ ವಾರ್ತೆ

ಹೈದರಾಬಾದ್, ಎ. 20: ಕೊರೊನಾ ಹರಡುವುದನ್ನು ತಡೆಯುವ ಸಲುವಾಗಿ ಹೇರಲಾದ ಲಾಕ್ ಡೌನನ್ನು ಮೇ.7ರವರೆಗೆ ಮುಂದುವರಿಸಲು ತೆಲಂಗಾಣ ಸರಕಾರ ನಿರ್ಧರಿಸಿದ್ದು ರಾಜ್ಯದ ಪರಿಸ್ಥಿತಿಯನ್ನು ಮೇ ಐದರಂದು ಪರಿಶೀಲಿಸಿದ ಬಳಿಕ ಮುಂದಿನ ನಿರ್ಧಾರಕ್ಕೆ ಬರಲಾಗುವುದು ಎಂದು ಮುಖ್ಯಮಂತ್ರಿ ಚಂದ್ರಶೇಖರ ರಾವ್ ಹೇಳಿದ್ದಾರೆ. ಸ್ವಿಗ್ಗಿ, ಝೊಮೆಟೊಗಳಂತಹವುಗಳ ವಿತರಣೆಗೆ ಅನುಮತಿಯಿಲ್ಲ. ಆದರೆ ಮದ್ದು ಕಂಪೆನಿಗಳು ಲಾಕ್ ಡೌನ್‍ನಲ್ಲಿಯೂ ಕಾರ್ಯ ನಿರ್ವಹಿಸಲಿದೆ. ಅಕ್ಕಿ ಮಿಲ್ಲುಗಳಿಗೂ ಕೆಲಸ ಮಾಡಲು ಅನುಮತಿ ನೀಡಲಾಗುವುದು ಎಂದು ತಿಳಿಸಿದರು.

ಆನ್ ಲೈನ್‍ ಮೂಲಕ ಆಹಾರ ವಿತರಣೆಗೂ ಅವಕಾಶ ಇಲ್ಲ. ಈ ರೀತಿ ಯಾರಾದರೂ ಪ್ರಯತ್ನಿಸಿದರೆ ಕ್ರಮ ಜರಗಿಸಲಾಗುವುದು. ವಲಸೆ ಕಾರ್ಮಿಕರಿಗೆ ವಿಶೇಷ ಪಡಿತರ ವಿತರಣೆ ವ್ಯವಸ್ಥೆ ಮಾಡಲಾಗುವುದು. ಕುಟುಂಬದೊಂದಿಗೆ ತೆಲಂಗಾಣದಲ್ಲಿರುವವರಿಗೆ 1500 ರೂಪಾಯಿ ಧನ ಸಹಾಯ ನೀಡಲಾಗುವುದು. ಜೀವ ಅಪಾಯಕ್ಕೊಡ್ಡಿ ಸೇವಾರಂಗದಲ್ಲಿರುವ ಪೋಲೀಸರಿಗೆ ಶೇ. 10ರಷ್ಟು ಸಂಬಳ ಹೆಚ್ಚಿಸಲು ಸರಕಾರ ತೀರ್ಮಾನಿಸಿದೆ ಎಂದು ಮುಖ್ಯ ಮಂತ್ರಿ ಹೇಳಿದರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.