ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಎ. 21: ರಾಷ್ಟ್ರಪತಿ ಭವನದಲ್ಲಿ ಕೊರೊನಾ ರೋಗ ದೃಢಪಟ್ಟಿದ್ದು ಇಲ್ಲಿನ ಶುಚಿತ್ವ ಕಾರ್ಮಿಕರಿಗೆ ಕೊರೊನಾ ರೋಗ ಬಂದಿದ್ದು ದೃಢಪಟ್ಟಿದೆ. ನಂತರ ಮುನ್ನೆಚ್ಚರಿಕೆಯ ಭಾಗವಾಗಿ 125 ಕುಟುಂಬಗಳನ್ನು ಹೌಸ್ ಕೊರೆಂಟೈನ್ ನಲ್ಲಿರಲು ಸೂಚಿಸಲಾಗಿದೆ. ರೋಗಿಯ ಸಂಪರ್ಕದಲ್ಲಿದ್ದ ಕುಟುಂಬಗಳನ್ನು ಕೊರಂಟೈನ್‍ಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇದೇ ವೇಳೆ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹದಿನೆಂಟು ಸಾವಿರ ದಾಟಿದ್ದು 590 ಮಂದಿ ಮೃತಪಟ್ಟಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












