ಕೇರಳದಲ್ಲಿ ಮೇ 10ರ ನಂತರ ಎಸೆಸೆಲ್ಸಿ, ಹೈಯರ್ ಸೆಕಂಡರಿ ಪರೀಕ್ಷೆ

0
464

ಸನ್ಮಾರ್ಗ ವಾರ್ತೆ

ತಿರುವನಂತಪುರಂ, ಎ.21: ಎಸೆಲ್ಸಿ, ಹೈಯರ್ ಸೆಂಕಡರಿ ಪರೀಕ್ಷೆಗಳು ಮೇ 10ರ ನಂತರ ನಡೆಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಕಾರ್ಯದರ್ಶಿ ಎ. ಶಾಜಹಾನ್ ಅಧ್ಯಕ್ಷತೆಯ ಕ್ವಾಲಿಟ್ ಇಂಪ್ರೂವ್‍ಮೆಂಟ್ ಪ್ರೋಗ್ರಾಂ (ಕ್ಯೂ. ಐ. ಪಿ) ಮೇಲ್ನೋಟ ವಹಿಸುವ ಸಮಿತಿ ಸಭೆಯಲ್ಲಿ ನಿರ್ಧಾರವಾಗಿದೆ. ಗಲ್ಫ್, ಲಕ್ಷದ್ವೀಪದಲ್ಲಿ ಪರೀಕ್ಷಾ ಕೇಂದ್ರಗಳು ಇರುವುದರಿಂದ ಲಾಕ್‍ಡೌನ್ ಸಡಿಲಿಕೆ ಮತ್ತು ಹಾಟ್‍ಸ್ಪಾಟ್ ಕೇಂದ್ರಗಳನ್ನು ಪರಿಗಣಿಸಿ ಪರೀಕ್ಷೆ ತಾರೇಕು ನಿರ್ಧರಿಸಲಾಗುವುದು.

ಅಗತ್ಯಬಿದ್ದರೆ ಎಸೆಸೆಲ್ಸಿ, ಹೈಯರ್ ಸೆಂಕಡರಿ ಪರೀಕ್ಷೆಗಳು ಬೆಳಗ್ಗೆ ಮತ್ತು ಮಧ್ಯಾಹ್ನ ನಡೆಯಲಿದೆ. ಈಗ ಇವುಗಳು ಈ ಹಿಂದೆ ಎಲ್ಲ ಒಟ್ಟಿಗೆ ನಡೆಯುತ್ತಿತ್ತು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.