ಕೊರೋನಾ: ಕನ್ನಡತಿ ವೈದ್ಯೆ ಉಮಾ ಮಧುಸೂದನ್ ರನ್ನು ಗೌರವಿಸಿದ ಅಮೇರಿಕ: ಮನೆಯೆದುರು ವಾಹನಗಳ ಪೆರೇಡ್- ವೀಡಿಯೊ

0
635

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್ ಏಪ್ರಿಲ್ 21- ಕೋರೋನಾ ಜಾಗತಿಕವಾಗಿ ತಲ್ಲಣ ಉಂಟು ಮಾಡಿರುವುದು ಒಂದು ಕಡೆಯಾದರೆ ತನ್ನದೇ ದೇಶದ ಪ್ರಜೆಗಳನ್ನು ಮನೆಯಿಂದ ಹೊರಬರದಂತೆ ಸರಕಾರಗಳು ಕಡಿವಾಣ ಹಾಕುತ್ತಿರುವುದು ಇನ್ನೊಂದು ಕಡೆ. ಈ ನಡುವೆ ಮನೆಯಿಂದ ಹೊರಬಂದು ಕಾಯಿಲೆ ಪೀಡಿತರನ್ನು ಗುಣಮುಖರಾಗಿಸಲು ಸಾಹಸ ಪಡುತ್ತಿರುವ ವೈದ್ಯರು ಮತ್ತೊಂದು ಕಡೆ. ಎಲ್ಲರೂ ಮನೆಯಲ್ಲಿರುವಾಗ ತಾವು ಮಾತ್ರ ಆಸ್ಪತ್ರೆಗೆ ಧಾವಿಸಿ ಅಪಾಯದ ಸನ್ನಿವೇಶದಲ್ಲೂ ರೋಗಿಗಳನ್ನು ತಪಾಸಿಸಿ ಗುಣಪಡಿಸಲು ಶ್ರಮಿಸುತ್ತಿರುವ ವೈದ್ಯರ ಬಗ್ಗೆ ಜಾಗತಿಕವಾಗಿ ಶ್ಲಾಘನೆಗಳು ವ್ಯಕ್ತವಾಗುತ್ತಿವೆ. ಅವರಿಗಾಗಿ ನಾಗರಿಕರು ಚಪ್ಪಾಳೆ ತಟ್ಟುವುದು, ಕರತಾಡನ ಮಾಡುವುದು, ಗೌರವಿಸುವುದು ಇತ್ಯಾದಿಗಳೆಲ್ಲಾ ನಡೆಯುತ್ತಿವೆ. ಇಂಥದೊಂದು ಸನ್ನಿವೇಶ ಅಮೆರಿಕದಲ್ಲಿ ನಡೆದಿದೆ.

ಅಮೆರಿಕಾದ ಸೌತ್ ವಿಂಡ್ಸರ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಮೈಸೂರು ಮೂಲದ ಉಮಾ ಮಧುಸೂದನ್ ಅವರನ್ನು ಅಲ್ಲಿನ ಸರಕಾರ ಗೌರವಿಸಿರುವ ವಿಡಿಯೋ ವೈರಲ್ ಆಗಿದೆ. ಈ ಕುರಿತಾದ ವೀಡಿಯೋವನ್ನು ನಟ ಆದಿಲ್ ಹುಸೇನ್ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಪೊಲೀಸರ ಕಾರುಗಳು, ಅಗ್ನಿಶಾಮಕ ದಳದ ವಾಹನಗಳು ಮತ್ತು ನಾಗರಿಕರ ಕಾರುಗಳು ಸೈರನ್ ಗಳೊಂದಿಗೆ ಅಭಿನಂದನೆ ಸಲ್ಲಿಸುತ್ತಾ ಸಾಗುವುದು ಮತ್ತು ಸುಧಾ ಮಧುಸೂದನ್ ಅವರು ತಮ್ಮ ಮನೆಯ ಮುಂಭಾಗದ ಅಂಗಳದಲ್ಲಿ ನಿಂತು ಪ್ರತಿಕ್ರಿಯಿಸುತ್ತಿರುವುದು ವೀಡಿಯೋದಲ್ಲಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.