ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಎ. 23: ಕೊರೊನಾದಿಂದಾಗಿ ಜನರಿಗೆ ನಷ್ಟ ಆದರೂ ಪ್ರಕೃತಿಗೆ ಲಾಭವಾಗಿದೆ ಎಂದು ಅಮೆರಿಕದ ನಾಸ ಹೇಳಿದೆ. ಈ ವರ್ಷ ಉತ್ತರಭಾರತದಲ್ಲಿ ಮಾಲಿನ್ಯದಲ್ಲಿ ಬೃಹತ್ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಅಮೆರಿಕದ ಬಾಹ್ಯಕಾಶ ಸಂಸ್ಥೆ ಲೆಕ್ಕ ಬಿಡುಗಡೆಗೊಳಿಸಿದೆ. ಅಂದರೆ ಅದರ ಪ್ರಕಾರ ಇಪ್ಪತ್ತು ವರ್ಷದ ಹಿಂದಿನ ಮಟ್ಟಕ್ಕೆ ಮಾಲಿನ್ಯ ಪ್ರಮಾಣ ಇಳಿಮುಖಗೊಂಡಿದೆ.
ಕೊರೊನಾ ಪ್ರತಿರೋಧದ ಭಾಗವಾಗಿ ಲಾಕ್ಡೌನ್ ಘೋಷಿಸಿದ್ದರಿಂದ ಜನರು ಮನೆಯೊಳಗಾಗಿದ್ದಾರೆ. ಲಾಕ್ಡೌನ್ ಘೋಷಿಸಿದ ಮೊದಲ ವಾರದ ಬಳಿಕ ಏರೊಸೇಲ್ ಪ್ರಮಾಣ ಕಡಿಮೆಯಾಯಿತು ಎಂದು ನಾಸಾದ ವಿಜ್ಞಾನಿ ಪವನ್ ಗುಪ್ತ ಹೇಳಿದರು. ನಾಸಾದ ಉಪಗ್ರಹ ಮಾಲಿನ್ಯ ಕಡಿಮೆಯಾಗಿದ್ದನ್ನು ಗುರುತಿಸಿದ್ದು ಮಾರ್ಚ್ 25ರಿಂದ ಭಾರತದಲ್ಲಿ ಲಾಕ್ ಡೌನ್ ಘೋಷಣೆಯಾಗಿತ್ತು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












