ಸನ್ಮಾರ್ಗ ವಾರ್ತೆ
ಲಂಡನ್, ಮೇ. 24: ಆಕ್ಸ್ ಫರ್ಡ್ ಯುನಿವರ್ಸಿಟಿ ಅಭಿವೃದ್ಧಿ ಪಡಿಸಿದ ವ್ಯಾಕ್ಸಿನ್ ಇಂದಿನಿಂದ ಮಾನರ ಮೇಲೆ ಪ್ರಯೋಗಿಸಲಾಗುತ್ತಿದೆ. ಪರೀಕ್ಷೆಯು ಯಶಸ್ವಿಯಾದರೆ ಬ್ರಿಟಿಷರಿಗೆ ವ್ಯಾಕ್ಸಿನ್ ಒದಗಿಸುವುದಕ್ಕೆ ಅತ್ಯಂತ ಬೇಗನೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಕಾರ್ಯದರ್ಶಿ ಹಾಂಡ್ ಕಾಂಕ್ ಹೇಳಿದರು. ಬ್ರಿಟನ್‍ನ ಆಕ್ಸ್ ಫರ್ಡ್ ಯುನಿವರ್ಸಿಟಿ ಮತ್ತು ಇಂಪೀರಿಯಲ್ ಕಾಲೇಜಿನಲ್ಲಿ ಕೊರೊನಾ ವ್ಯಾಕ್ಸಿನ್ ಸಂಶೋಧನೆ ನಡೆಯುತ್ತಿದೆ. ವ್ಯಾಕ್ಸಿನ್ ಅಭಿವೃದ್ಧಿ ಪಡಿಸಲು ಸಾಧ್ಯವಿರುವ ಎಲ್ಲ ಉಪಾಯಗಳನ್ನು ಸರಕಾರ ಹುಡುಕುತ್ತಿದೆ ಎಂದು ಹ್ಯಾಂಡ್ ಕಾಕ್ ಹೇಳಿದ್ದಾರೆ.
ಕೊರೊನಾ ವ್ಯಾಕ್ಸಿನ್ ಸಂಶೋಧನೆಗಾಗಿ 420 ಕೋಟಿ ರೂಪಾಯಿಯನ್ನು ಎರಡು ಸಂಸ್ಥೆಗಳಿಗೆ ಸರಕಾರ ಒದಗಿಸಿದೆ. ಪರೀಕ್ಷೆ ಯಶಸ್ವಿಯಾಗಿಬಿಟ್ಟರೆ ಇಂಜೆಕ್ಷನ್ ಉತ್ಪಾದಿಸಲು ಸರಕಾರ ಹಣ ಹೂಡಿಕೆ ಮಾಡಲಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












