ಥಾಯ್ಲೆಂಡಿನಲ್ಲಿ ಒಂದು ತಿಂಗಳ ಮಗು ಕೊರೊನದಿಂದ ಗುಣಮುಖ

0
577

ಸನ್ಮಾರ್ಗ ವಾರ್ತೆ

ಬ್ಯಾಂಕಾಕ್, ಎ. 24: ಥಾಯ್ಲೆಂಡಿನಲ್ಲಿ ಒಂದು ತಿಂಗಳ ಮಗು ಕೊರೊನಾದಿಂದ ಬಳಲಿತ್ತು. ಅದೀಗ ಗುಣಮುಖಗೊಂಡಿದೆ ಎಂದು ವರದಿಯಾಗಿದೆ. ಅಲ್ಲಿ ಅತೀ ಕಡಿಮೆ ವಯಸ್ಸಿನ ಕೊರನಾ ರೋಗಿ ಈ ಮಗು ಆಗಿತ್ತು. ನಾಲ್ಕು ರೀತಿಯ ಆಂಟಿ ವೈರಲ್ ಮದ್ದನ್ನು ಮಗುವಿಗೆ ಕೊಡಲಾಗಿದೆ. ಮಗು ಚೇತರಿಸಿಕೊಂಡಿದೆ.

ವೈದ್ಯರ ತಂಡ ಮಗುವನ್ನು ಪ್ರತಿದಿವಸವೂ ಪರೀಕ್ಷಿಸಿತ್ತು. ಹತ್ತು ದಿನಗಳವರೆಗೆ ಮದ್ದು ಕೊಡಲಾಯಿತು. ಕ್ರಮೇಣ ಮಗುವಿನ ಆರೋಗ್ಯ ಸುಧಾರಿಸತೊಡಗಿತು ಎಂದು ವೈದ್ಯರು ತಿಳಿಸಿದ್ದಾರೆ. ಥಾಯ್ಲೆಂಡ್‍ನಲ್ಲಿ ಹದಿನೈದು ಮಂದಿಗೆ ಬುಧವಾರ ಕೊರೊನಾ ರೋಗ ಇರುವುದು ದೃಢಪಟ್ಟಿದೆ. ಒಬ್ಬರು ಮೃತಪಟ್ಟಿದ್ದಾರೆ. ಇಲ್ಲಿ ಒಟ್ಟು 2826 ಕೊರೊನಾ ರೋಗಿಗಳಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.