ಸನ್ಮಾರ್ಗ ವಾರ್ತೆ
ಪುತ್ತೂರು : ಬಂಟ್ವಾಳದಲ್ಲಿ ಕೊರೊನದಿಂದಾಗಿ ಸಂಭವಿಸಿದ ಸಾವಿನ ಬಳಿಕ ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲಿ ಕೊರೊನ ಟೆಸ್ಟಿಂಗ್ ಕಿಯೋಸ್ಕ್ ಸ್ಥಾಪಿಸಬೇಕೆಂದು ವೆಲ್ಫೇರ್ ಪಾರ್ಟಿಯು ನೀಡಿದ ಮನವಿಗೆ ಜಿಲ್ಲಾಡಳಿತವು ಸ್ಪಂದಿಸಿ ಇದೀಗ ಪುತ್ತೂರಿನಲ್ಲಿ ಟೆಸ್ಟಿಂಗ್ ಸೆಂಟರ್ ಆರಂಭಿಸಿರುವ ಕ್ರಮವನ್ನು ಪಕ್ಷವು ಶ್ಲಾಘಿಸಿದೆ. ಇದೇ ರೀತಿ ಹೆಚ್ಚಿನ ಮಂದಿಯನ್ನು ಕೊರೊನ ಪರೀಕ್ಷೆಗೊಳಪಡಿಸುವ ಸಲುವಾಗಿ ಜಿಲ್ಲೆಯ ಇನ್ನುಳಿದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕೂಡಾ ಜಿಲ್ಲಾಡಳಿತ ಶೀಘ್ರದಲ್ಲೇ ಮಾಡಬೇಕಾಗಿದೆ ಎಂದು ಒತ್ತಾಯಿಸಿದೆ.
ಅದೇ ರೀತಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಿಸಲು ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮವನ್ನು ಜಿಲ್ಲಾಡಳಿತ ಕೈಗೊಳ್ಳಬೇಕು. ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಸಲಹೆಯನ್ನು ಪಡೆದು ಜಿಲ್ಲಾಡಳಿತವು ಮುಂದುವರಿಯಬೇಕು.
ಕೊರೊನ ನಿಯಂತ್ರಿಸಲು ವೆಲ್ಫೇರ್ ಪಕ್ಷವು ಜಿಲ್ಲಾಡಳಿತಕ್ಕೆ ಎಲ್ಲಾ ರೀತಿಯ ಸಹಕಾರವನ್ನು ನೀಡಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷರಾದ ಸುಲೈಮಾನ್ ಕಲ್ಲರ್ಪೆ ತಿಳಿಸಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












