ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಎ. 24: ಅನಿವಾಸಿ ಭಾರತೀಯರು ಊರಿಗೆ ಬಂದರೆ ಅವರಿಗಾಗಿ ಏನು ಸೌಲಭ್ಯಗಳನ್ನು ಮಾಡಿಟ್ಟಿದ್ದೀರಿ ಎಂದು ರಾಜ್ಯ ಸರಕಾರಗಳಿಂದ ವಿವರಣೆಯನ್ನು ಕೇಂದ್ರ ಸರಕಾರ ಕೇಳಿದೆ. ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ವಿದೇಶ ಕಾರ್ಯದರ್ಶಿ ವಿಕಾಸ್ ಸ್ವರೂಪ್ ಈ ಸೂಚನೆ ನೀಡಿದ್ದಾರೆ. ಅನಿವಾಸಿಗಳನ್ನು ಊರಿಗೆ ಕರೆತಂದರೆ ಅವರಿಗಾಗಿ ಯಾವ ಸೌಕರ್ಯವನ್ನು ರಾಜ್ಯಗಳಲ್ಲಿ ಮಾಡಿಟ್ಟಿದ್ದೀರಿ, ಅದನ್ನು ತಿಳಿಸುವಂತೆ ವಿಕಾಸ್ ಸ್ವರೂಪ್ ಸುತ್ತೋಲೆ ಹೊರಡಿಸಿದ್ದಾರೆ. ಆರೋಗ್ಯ ತಪಾಸಣೆ, ಕಾರೊಂಟೈನ್ ಕೇಂದ್ರಗಳು ,ವಿಮಾನ ನಿಲ್ದಾಣದ ನಂತರ ಮನೆಗೆ ತಲುಪಿಸುವ ಸೌಕರ್ಯ ಇತ್ಯಾದಿ ವಿವರಗಳನ್ನು ನೀಡಲು ಸೂಚಿಸಿದ್ದಾರೆ.
ರಾಜ್ಯ ಸರಕಾರಗಳ ಸಿದ್ಧತೆಯನ್ನು ನೋಡಿಕೊಂಡ ನಂತರ ಕೇಂದ್ರ ಸರಕಾರ ಅನಿವಾಸಿಗಳನ್ನು ಊರಿಗೆ ಕರೆತರುವ ವಿಷಯವನ್ನು ತೀರ್ಮಾನಿಸಲಿದೆ. ಇದೇವೇಳೆ ಅನಿವಾಸಿಗಳನ್ನು ಊರಿಗೆ ಕರೆತಂದರೆ ಅವರಿಗೆ ಆರೋಗ್ಯ ಸುರಕ್ಷೆಯ ವ್ಯವಸ್ಥೆಯ ಸಹಿತ ಎಲ್ಲ ಸೌಕರ್ಯಗಳನ್ನು ನೀಡಲಾಗುವುದು ಎಂದು ಕೇರಳ ಸರಕಾರ ತಿಳಿಸಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












