ಸನ್ಮಾರ್ಗ ವಾರ್ತೆ
ಬೆಂಗಳೂರು ಏಪ್ರಿಲ್ 26- ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಲಾಗಿದ್ದು ಈ ಕ್ರಮ ಟ್ವಿಟರ್ ನ ರಾಷ್ಟ್ರ ವಿರೋಧಿ ನೀತಿಯನ್ನು ಮತ್ತೊಮ್ಮೆ ಬಯಲುಗೊಳಿಸಿದೆ ಎಂದು ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಎಪ್ರಿಲ್ 22ರಂದು ತಬ್ಲೀಗಿ ಜಮಾಅತ್ ನ ವಿರುದ್ಧ ತಾನು ಟ್ವೀಟ್ ಮಾಡಿದ್ದು, ಇದನ್ನು ನೆಪವಾಗಿಸಿಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದವರು ಹೇಳಿಕೊಂಡಿದ್ದಾರೆ. ಒಂದು ವೇಳೆ ಆ ಟ್ವೀಟ್ ಅನ್ನು ಅಳಿಸಿದರೆ ಟ್ವೀಟರ್ ಅಕೌಂಟ್ ಅನ್ನು ಪುನಃ ಚಾಲ್ತಿಗೆ ತರುವುದಾಗಿ ಟ್ವಿಟರ್ ಹೇಳಿದೆ ಎಂದು ಅವರು ಹೇಳಿದ್ದಾರೆ.
ಆದರೆ ತಾನು ಯಾವ ಕಾರಣಕ್ಕೂ ಆ ಟ್ವೀಟ್ ಅಳಿಸಲಾರೆ. ದೇಶವಿರೋಧಿ ಸಾಮಾಜಿಕ ಜಾಲತಾಣದ ಅಕೌಂಟ್ ಗಿಂತ ನನ್ನ ದೇಶ, ನನ್ನ ಸಿದ್ಧಾಂತ, ನನ್ನ ಜೀವನದ ಆದ್ಯತೆಯಾಗಿದೆ ಎಂದು ಅವರು ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












