ತಮಿಳ್ನಾಡು- ಐದು ನಗರದಲ್ಲಿ ಲಾಕ್‍ಡೌನ್

0
738

ಸನ್ಮಾರ್ಗ ವಾರ್ತೆ

ಚೆನ್ನೈ, ಎ. 26: ಕೊರೊನಾ ನಿಯಂತ್ರಿಸಲು ತಮಿಳ್ನಾಡಿನ ಚೆನೈ ಸಹಿತ ಐದು ನಗರಗಳಲ್ಲಿ ಘೋಷಿಸಿದ ಸಂಪೂರ್ಣ ಲಾಕ್‍ಡೌನ್‍ ಇಂದು ಬೆಳಗಿನಿಂದ ಜಾರಿಗೆ ಬಂದಿದೆ.ರೋಗ ಪೀಡಿತರ ಸಂಖ್ಯೆ 1821ಕ್ಕೆ ಏರಿಕೆಯಾಗಿದ್ದು ಐದು ನಗರದಲ್ಲಿ ನಿಯಂತ್ರಣವನ್ನು ಹೇರಲಾಗಿದೆ. ಚೆನ್ನೈ, ಕೊಯಮತ್ತೂರ್, ಮಧುರೈ ನಗರಗಳಲ್ಲಿ ರವಿವಾರ ಬೆಳಗ್ಗೆ ಆರಂಭವಾದ ಲಾಕ್‍ಡೌನ್ ಬುಧವಾರದ ವರೆಗೆ ಇರಲಿದೆ. ಸಣ್ಣ ನಗರಗಳಾದ ಸೇಲಂ, ತಿರಿಪ್ಪುರ್ ಮಂಗಳವಾರದವರೆಗೆ ಇರಲಿದೆ. ದಿನಸಿ, ತರಕಾರಿ ಅಗತ್ಯ ವಸ್ತುಗಳಿಗಾಗಿ ಜನರು ಹೊರಗೆ ಇಳಿಯಲು ಕೂಡ ಅನುಮತಿಯಿಲ್ಲ .

ಈ ಅಂಗಡಿಗಳು ಬೆಳಗ್ಗೆ ತೆರೆದಿದ್ದರೂ ಮನೆಗಳಿಗೆ ಸರಬರಾಜು ಮಾಡಲಾಗುವುದು. ಶುಕ್ರವಾರ ತಮಿಳ್ನಾಡಿನ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಕಠಿಣ ಕ್ರಮಗಳನ್ನು ಘೋಷಿಸಿದ್ದರು. ಸಾರ್ವಜನಿಕರಿಗೆ ಎರಡು ಅವಧಿಯಲ್ಲಿ ಅಣುಮುಕ್ತಗೊಳಿಸಲು ಸರಕಾರ ಕ್ರಮ ಜರಗಿಸಲಿದ್ದು ಸರಕಾರ ಮೇಲ್ನೋಟದಲ್ಲಿ ಕೊರೊಂಟೈನ್ ವೇಳೆಯಲ್ಲಿ ಸಬ್ಸಿಡಿ ದರದಲ್ಲಿ ಆಹಾರ ಲಭಿಸುವಂತೆ ಮಾಡಲಿದೆ. ಎಟಿಎಂ, ಲ್ಯಾಬ್, ಆಸ್ಪತ್ರೆ, ಫಾರ್ಮಸಿ ನಿಯಮದಂತೆ ಕಾರ್ಯನಿರ್ವಹಿಸಲಿದೆ.

ಚೆನ್ನೈಯಲ್ಲಿ 495 ಮಂದಿಗೆ ಕೊರೊನಾ ಇದೆ. ಕೊಯಮತ್ತೂರಿನಲ್ಲಿ 141 ತಿರುಪ್ಪುರಿನಲ್ಲಿ 110, ಮಧುರೆಯಲ್ಲಿ 60 ಮಂದಿಗೆ, ಸೇಲಂನಲ್ಲಿ 30 ಮಂದಿಗೆ ಕೊರೊನಾ ಕಂಡು ಬಂದಿದೆ. ತಮಿಳ್ನಾಡು ಭಾಗದಲ್ಲಿ ಇಂದು ಬೆಳಗ್ಗೆ ಭಾರೀ ಮಳೆ ಬಂದಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.