ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, 26: ಹೊಸದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ನ ಹಿಂದೂ ರಾವ್ ಆಸ್ಪತ್ರೆಯಲ್ಲಿ ದಾದಿಗೆ ಕೊರೊನಾ ಬಂದಿದ್ದು ಈ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಮುಚ್ಚಲಾಗಿದೆ. ಶನಿವಾರ ನರ್ಸ್ಗೆ ಕೊರೊನಾ ಬಂದಿದೆ. ವೈರಸ್ ನಾಶ ಕಾರ್ಯಕ್ರಮಗಳಿಗಾಗಿ ಆಸ್ಪತ್ರೆ ಮುಚ್ಚಲಾಗಿದೆ.
ಕಳೆದ ಎರಡು ವಾರದಿಂದ ಆಸ್ಪತ್ರೆಯ ವಿವಿಧ ಸೆಕ್ಷನ್ಗಳಲ್ಲಿ ನರ್ಸ್ ಆಗಿ ಇವರು ಕೆಲಸ ಮಾಡಿದ್ದರು. ಆದ್ದರಿಂದ ಆಸ್ಪತ್ರೆಯನ್ನು ಮುಚ್ಚಲಾಗಿದೆ. ನರ್ಸ್ನೊಂದಿಗೆ ಸಂಪರ್ಕ ಹೊಂದಿದವರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಮುನ್ಸಿಪಲ್ ಕಮಿಶನರ್ ವರ್ಷ ಜೋಷಿ ಹೇಳಿದ್ದಾರೆ. ಈಗ ಗೈನಾಕಾಲಜಿ ವಾರ್ಡಿನಲ್ಲಿ ಮಾತ್ರ ರೋಗಿಗಳಿದ್ದಾರೆ. ಘಟನೆಯಲ್ಲಿ ನಿರ್ಲಕ್ಷ್ಯವಾಗಿದೆ. ಇದರ ವಿರುದ್ಧ ತನಿಖೆ ನಡೆಸಬೇಕೆಂದು ಅವರು ಹೇಳಿದರು.
ಉತ್ತರ ದಿಲ್ಲಿಯಲ್ಲಿ ಅತೀ ದೊಡ್ಡ ಆಸ್ಪತ್ರೆ ಹಿಂದೂ ರಾವ್ ಆಗಿದ್ದು ನರ್ಸ್ನ ರೋಗ ದೃಢೀಕರಣಗೊಂಡ ಬಳಿಕ ಆಸ್ಪತ್ರೆಯಲ್ಲಿ ಇತರ ಸಿಬ್ಬಂದಿಗಳ ಸ್ಯಾಂಪಲ್ ಸಂಗ್ರಹಿಸಿ ಪರಿಶೀಲನೆಗೆ ಕಳುಹಿಸಲಾಗಿದೆ. ಸೋಮವಾರ ಇವರ ಫಲಿತಾಂಶ ಲಭಿಸಲಿದೆ. ದಿಲ್ಲಿಯಲ್ಲಿ 2625 ಮಂದಿಗೆ ಕೊರೊನಾ ದೃಢವಾಗಿದ್ದು ಶನಿವಾರ 111 ಮಂದಿಗೆ ರೋಗ ದೃಢಪಟ್ಟಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












