ಸನ್ಮಾರ್ಗ ವಾರ್ತೆ
ತಿರುನಾಯವ, ಫೆ. 26: ಲಾಕ್ ಡೌನ್‍ನ ದಿನಗಳಲ್ಲಿ ಮಕ್ಕಳು ಗಾಳಿ ಪಟ ಬಿಡುವಾಗ ಸಾಮಾಜಿಕ ಅಂತರವನ್ನು ಪಾಲಿಸಿದ್ದಾರೆ. ಮಕ್ಕಳ ಮನಸ್ಸಿಗೆ ಸಮಾಧಾವಾಗಲು ಕೇರಳದ ಚೈಲ್ಡ್ ಪ್ರೊಟೆಕ್ಷನ್ ಕಚೇರಿ ಆಯೋಜಿಸಿದ ಗಾಳಿಪಟ ದೂರಕ್ಕೆ ಹಾರಿಸಿ … ಸಾಮಾಜಿಕ ಅಂತರ ಪಾಲಿಸಿ ಎಂಬ ಕಾರ್ಯಕ್ರಮದಲ್ಲಿ ಮಕ್ಕಳು ತಾವೇ ಗಾಳಿ ಪಟಮಾಡಿ ಆಕಾಶಕ್ಕೆ ಹಾರಿಸಿದ್ದಾರೆ.
ಗಾಳಿಪಟ ಹಾರಿಸುವ ಕಾರ್ಯಕ್ರಮವನ್ನು ಮಕ್ಕಳ ಮನೆಯಲ್ಲಿ, ಸರಕಾರಿ ಚಿಲ್ಡ್ರನ್ಸ್ ಹೋಂಗಳು ಮತ್ತು ಇತರ ಹೋಮ್‍ಗಳಲ್ಲಿ ಇಟ್ಟುಕೊಳ್ಳಲಾಯಿತು. ಗಾಳಿಪಟ ಕಾರ್ಯಕ್ರಮವನ್ನು ತವಾನೂರು ಚಿಲ್ಡ್ರನ್ಸ್ ಹೋಮ್‍ನಲ್ಲಿ ಜಿಲ್ಲಾ ಚೈಲ್ಡ್ ವಲ್ಫೇರ್ ಕಮಿಟಿ ಚೇರ್‍ಮೆನ್ ಉದ್ಘಾಟಿಸಿದರು. ಅಕ್ಷರ ಚೆಪ್ ಬಾಲವೇದಿಕೆಯ ಸಹಯೋಗದಲ್ಲಿ ಎಡಕ್ಕುಳಂ ಜಿಎಂಎಲ್‍ಇ ಸ್ಕೂಲ್ ಗ್ರೌಂಡ್‍ನಲ್ಲಿ ಗಾಳಿಪಟ ಹಾರಿಸುವುದರಲ್ಲಿ ಕೆಪಿ ಮಿನ್‍ಹಾಜ್, ಸಫ್ನಾ ಕಾಂಚೇರಿ, ದಿಲ್ನಾ ಫಾತಿಮ ಆನೆಕೆರೆ, ಶಬೀಬ್, ದಿಲು, ಮಿನು ಭಾಗವಹಿಸಿದ್ದರು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












