ಭಾರತದಲ್ಲಿ ಮೊದಲ ಪ್ಲಾಸ್ಮಾ ತೆರಪಿ ರೋಗಿ ಗುಣಮುಖ: ಕೊರೊನಾ ವಿರುದ್ಧ ಕ್ರಾಂತಿ, ಗೆದ್ದ ರೋಗಿ ದಿಲ್ಲಿಯವರು

0
1264

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಎ. 27: ಭಾರತದಲ್ಲಿ ಮೊದಲ ಪ್ಲಾಸ್ಮಾ ತೆರಪಿಗೊಳಗಾಗಿರುವ ದಿಲ್ಲಿಯ ಸಾಕೇತ್‍ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 49 ವರ್ಷದ ರೋಗಿ ಗುಣಮುಖರಾಗಿದ್ದಾರೆ. ಎಪ್ರಿಲ್ ನಾಲ್ಕರಂದು ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಜ್ವರ, ಉಸಿರಾಟ ತೊಂದರೆಯಿಂದ ಅವರು ಬಳಲುತ್ತಿದ್ದರು. ನ್ಯೂಮೋನಿಯ ಬಾಧೆ ನಂತರ ಇವರನ್ನು ವೆಂಟಿಲೇಟರ್ ಗೆ ಒಳಪಡಿಸಲಾಗಿತ್ತು.
ಏಳು ದಿವಸ ವೆಂಟಿಲೇಟರ್ ನಲ್ಲಿ ಇರಿಸಿದ ರೋಗಿಗೆ ಪ್ಲಾಸ್ಮಾ ತೆರಪಿ ಮಾಡಲಾಯಿತು. ಕೊರೊನಾ ಪೀಡಿತನಾಗಿ ರೋಗ ಮುಕ್ತನಾದ ವ್ಯಕ್ತಿಯ ರಕ್ತದಿಂದ ಪ್ಲಾಸ್ಮಾ ಪ್ರತ್ಯೇಕಿಸಿ ಚುಚ್ಚು ಮದ್ದು ನೀಡಿದ ಚಿಕಿತ್ಸೆಯಲ್ಲಿ ಇವರು ಗುಣಮುಖರಾಗಿದ್ದಾರೆ. ಮೂರು ವಾರ ಮೊದಲು ಕೊರೊನಾ, ಹೈಪಟೈಟಿಸ್‍ ಬಿ, ಹೈಪಟೈಟಿಸ್ ಸಿ, ಎಚ್,ಐ.ವಿ ಇಲ್ಲ ಎಂದು ಖಚಿತ ಪಡಿಸಿದ ಬಳಿಕ ಪ್ಲಾಸ್ಮಾ ತೆರಪಿ ಮಾಡಲಾಯಿತು.

ಕೊರೊನಾ ಪ್ರತಿರೋಧದಲ್ಲಿ ಸವಾಲು ಎದುರಿಸುತ್ತಿರುವ ಪರಿಸ್ಥಿತಿಯಲ್ಲಿ ಪ್ಲಾಸ್ಮಾ ತೆರಪಿಯಿಂದ ರೋಗಿ ಗುಣಮುಖರಾಗಿದ್ದರಲ್ಲಿ ಸಂತೋಷವಿದೆ. ಚಿಕಿತ್ಸೆ ರಂಗದ ಹೊಸ ಅವಕಾಶ ಇದು ಎಂದು ಮ್ಯಾಕ್ಸ್ ಹೆಲ್ತ್‍ ಕೇರ್ ಎಂಡಿ ವೈದ್ಯ ಸಂದೀಪ್ ಬುದ್ಧಿರಾಜ್ ಹೇಳಿದರು. ಕೇಂದ್ರ ಸರಕಾರದ ಕೊರೊನಾ ಚಿಕಿತ್ಸೆಯ ಮಾನದಂಡಗಳ ಪ್ರಕಾರ ಪ್ಲಾಸ್ಮಾ ತೆರಪಿ ಪರಿಕ್ಷಿಸಲಾಗಿದೆ. ಇದರಿಂದ ಮಾತ್ರ ಶೇ. 100ರಷ್ಟು ರೋಗ ಮುಕ್ತಿ ಪಡೆಯಬಹುದು ಎಂದು ಡಾ. ಸಂದೀಪ್ ಹೇಳಿದರು. ಒಬ್ಬರಿಗೆ 400 ಮಿಲಿ ಪಾಸ್ಮಾವನ್ನು ದಾನ ಮಾಡಲು ಸಾಧ್ಯವಿದೆ. ಇದರಿಂದ ಎರಡು ಜೀವಗಳನ್ನು ರಕ್ಷಿಸಲು ಆಗಬಹುದು. 200 ಮಿಲಿ ಪ್ಲಾಸ್ಮಾ ಒಬ್ಬ ರೋಗಿಯ ಚಿಕಿತ್ಸೆಗೆ ಬಳಸಬಹುದಾಗಿದೆ.

ಕೊರೊನಾ ಬಾಧಿಸಿ ರೋಗಮುಕ್ತರಾದ ವ್ಯಕ್ತಿಗಳ ರಕ್ತದಿಂದ ಪ್ಲಾಸ್ಮಾ ಉಪಯೋಗಿಸಿ ಚಿಕಿತ್ಸೆ ಪಡೆಯುವ ರೀತಿಯಲ್ಲಿ ಕಾನ್‍ವಲಸೆಂಟ್ ತೆರಪಿ ಮಾಡಲಾಗುತ್ತದೆ. ರೋಗದಿಂದ ಗುಣಮುಖರಾದ ಎರಡು ವಾರಗಳ ಬಳಿಕ ಇವರ ರಕ್ತದಿಂದ ಆಂಟಿಬೊಡಿಕ್‍ಗಳನ್ನು ತೆಗೆದು ರೋಗಿಗೆ ಚುಚ್ಚು ಮದ್ದಿನ ಮೂಲಕ ನೀಡಲಾಗುವುದು. ಈ ಚುಚ್ಚು ಮದ್ದು ಹೋದ ಕೂಡಲೇ ರೋಗದ ಲಕ್ಷಣಗಳು ಕಡಿಮೆಯಾಗುವುದು. ದೇಹದಲ್ಲಿ ಆಕ್ಸಿಜನ್‍ನ ಪ್ರಮಾಣ ಹೆಚ್ಚುತ್ತದೆ . ವೈರಸ್ ನಿಧಾನ ಶಕ್ತಿಗುಂದುತ್ತದೆ ಎಂದು ಸಂಶೋಧಕ ತಂಡ ಹೇಳಿಕೊಂಡಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.