ಸನ್ಮಾರ್ಗ ವಾರ್ತೆ
ಸೋಲ್, ಎ. 27: ಉತ್ತರ ಕೊರಿಯ ಆಡಳಿತಗಾರ ಕಿಂಗ ಜೊಂಗ್ ಉನ್ ಬದುಕಿದ್ದಾರೆ ಎಂದು ದಕ್ಷಿಣ ಕೊರಿಯದ ಅಧ್ಯಕ್ಷ ಮುಜ್ ಜಾಜಿಯ ಭದ್ರತಾ ಅಧಿಕಾರಿ ತಿಳಿಸಿದ್ದು ಎಪ್ರಿಲ್ 15ರ ಅಜ್ಜನ ಜನ್ಮದಿನದಲ್ಲಿ ಕಿಂ ಭಾಗವಹಿಸಿರಲಿಲ್ಲ. ತದನಂತರ ಕಿಮ್ ಅನಾರೋಗ್ಯಪೀಡಿತರಾಗಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಬಿರುಸಿನಿಂದ ಪ್ರಚಾರಗೊಂಡಿತ್ತು. ಅವರು ಆರೋಗ್ಯ ಪೂರ್ಣರು, ಎಪ್ರಿಲ್ ಹದಿಮೂರರಂದು ದೇಶದ ರಿಸಾರ್ಟ್ ನಗರ ವಾನ್ಝಾನ್ನಲ್ಲಿದ್ದಾರೆ ಎಂದು ದಕ್ಷಿಣ ಕೊರಿಯನ್ ಸುರಕ್ಷಾ ಸಲಹೆಗಾರ ಸಿಎನ್ಎನ್ ಚ್ಯಾನೆಲ್ ಗೆ ತಿಳಿಸಿದರು. ಕಿಂ ಜೊಂಗ್ ಉನ್ರ ಆರೋಗ್ಯ ಕುರಿತ ಚರ್ಚೆಗಳು ಬಿರುಸನ್ನು ಪಡೆದುಕೊಂಡಿವೆ.
ಅವರ ವಿಶೇಷ ಟ್ರೈನ್ ವಾನ್ಝಾನ್ನಲ್ಲಿ ಕಂಡು ಬಂದಿದ್ದು ಅಮೆರಿಕದ ಉತ್ತರ ಕೊರಿಯನ್ ಮಾನಿಟರಿಂಗ್ ಪ್ರೊಜೆಕ್ಟ್ ಇದಕ್ಕೆ ಸಂಬಂಧಿಸಿದ ಸ್ಯಾಟಲೆಟ್ ಚಿತ್ರ ತೋರಿಸಿದೆ. ಉತ್ತರ ಕೊರಿಯ ಸಂಸ್ಥಾಪಕ ಅಜ್ಜ ಕಿಂ ಸುಂಗ್ರ ಹುಟ್ಟಿದ ದಿನಾಚರಣೆಯಲ್ಲಿ ಕಿಂಗ್ ಜೊಂಗ್ ಇರಲಿಲ್ಲ. ಅವರು ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಯಿತ್ತು. ಉತರ ಕೊರಿಯದ ಸೈನ್ಯ ಪೀಪಲ್ಸ್ ರೆವೆಲ್ಯೂಶನರಿ ಆರ್ಮಿಯ ವಾರ್ಷಿಕ ಕಾರ್ಯಕ್ರಕ್ಕೂ ಅವರು ಬಂದಿರಲಿಲ್ಲ. ಹೃದಯ ಶಸ್ತ್ರಕ್ರಿಯೆ ನಂತರ ಅವರ ಆರೋಗ್ಯ ಕೆಟ್ಟಿತ್ತು ಎಂದು ದಕ್ಷಿಣ ಕೊರಿಯ ಸುದ್ದಿ ಮಾಧ್ಯಮಗಳು ಬರೆದಿದ್ದುವು. ಇದನ್ನೂ ಉತ್ತರಕೊರಿಯ ನಿರಾಕರಿಸಿಲ್ಲ. 2014ರಲ್ಲಿ ಒಮ್ಮೆ ಹೀಗೆ ಕಾಣೆಯಾಗಿದ್ದರು. ನಂತರ ಟಿವಿ ಚ್ಯಾನಲ್ಗೆ ಬಂದು ತನ್ನ ಉತಪಸ್ಥಿತಿಯನ್ನು ತಿಳಿಸಿದ್ದರು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












