ಸನ್ಮಾರ್ಗ ವಾರ್ತೆ
ಅಹ್ಮದಾಬಾದ್, ಎ. 27: ಅಹ್ಮದಾಬಾದಿನ ಹಿರಿಯ ಕಾಂಗ್ರೆಸ್ ನಾಯಕ ಕೊರೊನಾ ರೋಗಕ್ಕೆ ಬಲಿಯಾಗಿದ್ದಾರೆ. ಇವರು ಮುನ್ಸಿಪಲ್ ಕೌನಿಲರ್ ಆಗಿದ್ದರು. ನಲ್ವತ್ತು ವರ್ಷಗಳ ಕಾಲ ಕಾಂಗ್ರೆಸ್ನಲ್ಲಿ ಸಕ್ರಿಯರಾದ ವ್ಯಕ್ತಿ ಇವರು. ಇವರಿಗೆ ಕೊರೊನಾ ಬಂದಿರುವುದು ಎಪ್ರಿಲ್ 15ಕ್ಕೆ ದೃಢವಾಗಿತ್ತು. ನಂತರ ಚಿಕಿತ್ಸೆಗೆ ದಾಖಲಿಸಲಾಗಿತ್ತು. ರೋಗ ತೀರ ಉಲ್ಬಣವಾಗಿದ್ದರಿಂದ ವೆಂಟಿಲೇಟರ್ ನಲ್ಲಿರಿಸಿ ಚಿಕಿತ್ಸೆ ನೀಡಲಾಯಿತು.
ಇವರ ಬೆಹ್ರಾಂ ಪುರದಲ್ಲಿ 2000ಕ್ಕೂ ಹೆಚ್ಚು ಮಂದಿಗೆ ಕೊರೊನಾ ತಗಲಿತ್ತು. ಇದೇವೇಳೆ ಇಲ್ಲಿನ ಇನ್ನೊಬ್ಬ ಕಾಂಗ್ರೆಸ್ ನಾಯಕನಿಗೂ ಕೊರೊನಾ ಬಾಧೆ ದೃಢಪಟ್ಟಿದೆ. ಮಹಾರಾಷ್ಟ್ರದ ನಂತರ ಅತಿಹೆಚ್ಚು ಕೊರೊನಾ ವೈರಸ್ ಹಾನಿ ಮಾಡಿದ್ದು ಗುಜರಾತಿನಲ್ಲಾಗಿದ್ದು 3,071 ಮಂದಿಗೆ ರಾಜ್ಯದಲ್ಲಿ ರೋಗ ದೃಢಪಟ್ಟಿದೆ. ಒಟ್ಟು ಮೃತಪಟ್ಟವರ ಸಂಖ್ಯೆ 133 ಆಗಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












