ಸನ್ಮಾರ್ಗ ವಾರ್ತೆ
ಬೀಜಿಂಗ್, ಎ.29: ಕೊರೊನಾ ರೋಗ ಹರಡುವ ಸಾರ್ಸ್ ಕೋವ್ ಎಂಬ ವೈರಸನ್ನು ಪ್ರತಿರೋಧಿಸುವುದು ಸುಲಭವಲ್ಲ. ಫ್ಲೂ ಜ್ವರದಂತೆ ವರ್ಷವೂ ನಿಶ್ಚಿತ ಸಮಯದ ಮಧ್ಯಂತರದಲ್ಲಿ ಕೊರೊನಾ ಮರುಕಳಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಫ್ಲೂನಂತಹ ರೋಗಕ್ಕೆ ಪ್ರತಿವರ್ಷ ವಿಶ್ವದಲ್ಲಿ ಆರೂವರೆ ಲಕ್ಷ ಜನ ಮೃತಪಡುತ್ತಿದ್ದಾರೆ. ಮನುಷ್ಯ ದೇಹದಲ್ಲಿ ಹೆಚ್ಚುಕಾಲ ವೈರಸ್ ಗಳು ವಾಸಿಸಬಲ್ಲವು ಎಂದು ಕೊರೊನಧ ಇನ್ಸಿಟಿಟ್ಯೂಟ್ ಮುಖ್ಯಸ್ಥ ಜಿನ್ ಕಿಯು ಹೇಳಿದ್ದಾರೆ. ಅಮೆರಿಕದ ನ್ಯಾಶನಲ್ ಇನ್ಸಿಟಿಟ್ಯೂಡ್ ಆಫ್ ಅಲರ್ಜಿ ಆಂಡ್ ಇನ್ಪೆಂಕ್ಷನ್ ಡಿಸೀಸ್ ನಿರ್ದೇಶಕ ಅಂತೋನಿ ಪೊಸಿ ಸಹಿತ ಹಲವು ವಿಜ್ಞಾನಿಗಳು ಚಳಿಗಾಲದಲ್ಲಿ ಈ ರೋಗ ಹೆಚ್ಚು ಕಾಟ ಕೊಡಲಿದೆ ಎಂದು ಹೇಳಿದ್ದಾರೆ.
ವೈರಸ್ ಹೆಚ್ಚು ಹರಡುವುದು ರೋಗಲಕ್ಷಣ ಇಲ್ಲದವರು ಮತ್ತು ಸಣ್ಣ ಮಟ್ಟಿಗೆ ರೋಗ ಲಕ್ಷಣ ಕಂಡು ಬಂದವರಿಂದ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ರೋಗ ಬಾಧಿಸಿದ ಮೊದಲ ವಾರದಲ್ಲಿ ರೋಗ ಹೆಚ್ಚು ಹರಡುವ ಸಾಧ್ಯತೆ ಇರುತ್ತದೆ. ದೊಡ್ಡದಾಗಿ ಲಕ್ಷಣ ಇಲ್ಲದವರಿಂದ ಶೇ.44ರಷ್ಟು ಕೊರೊನಾ ಹಬ್ಬಿದೆ. ಕೊರೊನಾ ಯಾಕೆ ಕಠಿಣ ಉಸಿರಾಟ ತೊಂದರೆ ಮಾಡುತ್ತಿದೆ ಎಂಬುದನ್ನು ವಿಜ್ಞಾನಿಗಳು ತಿಳಿಸಿದ್ದು, ಅದಕ್ಕೆ ಈ ವೈರಸ್ ನೇರವಾಗಿ ಶ್ವಾಸಕೋಶಕ್ಕೆ ಹೋಗುತ್ತದೆ ಮತ್ತು ದೇಹದ ಇತರ ಕಡೆಗೆ ಹೋಗುತ್ತದೆ. ಇದು ತೀವ್ರ ಉಸಿರಾಟದ ತೊಂದರೆಯನ್ನು ತಂದೊಡ್ಡುತ್ತದೆ ಎಂದು ಹೇಳುತ್ತಾರೆ. ಸಾರ್ಸ್ ರೋಗ ಕೆಮ್ಮುವಾಗ, ಸೀನಿದಾಗ ರೋಗಾಣು ಶ್ವಾಸಕೋಶಕ್ಕೆ ಹೋಗುವುದಾದರೆ, ಕೊರೊನಾ ರೋಗ ಶ್ವಾಸಕೋಶದ ಮೇಲ್ಭಾಗಕ್ಕೆ ಹಾನಿ ಮಾಡುವುದರಿಂದ ರೋಗಾಣು ಹಾಡು ಹಾಡುವಾಗ ಮತ್ತು ಮಾತಾಡುವಾಗ ಇತರರಿಗೆ ಹರಡುತ್ತದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












