ಸನ್ಮಾರ್ಗ ವಾರ್ತೆ
ದುಬೈ,ಎ. 29: ದುಬೈಯಲ್ಲಿ ಟ್ಯಾಕ್ಸಿಚಾಲಕನಾಗಿ ದುಡಿಯುತ್ತಿದ್ದ ಕೇರಳದ ವ್ಯಕ್ತಿಯೊಬ್ಬರು ಕೊರೊನಾಕ್ಕೆ ಬಲಿಯಾಗಿದ್ದಾರೆ. ಕೊಲ್ಲಂ ಚಡಯಮಂಗಲಂ ಇಳಂಪಯನ್ನೂರ್ ನಿವಾಸಿ ರತೀಶ್ ಸೋಮರಾಜನ್(36) ದುಬೈಯಲ್ಲಿ ಕೊರೊನಾ ಪೀಡಿತರರಾಗಿ ಮೃತರಾದವರು. ನಿನ್ನೆ ರಾತ್ರೆ ಅವರಿಗೆ ಉಸಿರಾಟಕ್ಕೆ ಸಂಬಂಧಿಸಿದ ಅಡಚಣೆ ಕಾಣಿಸಿಕೊಂಡು ಅದು ಉಲ್ಬಗಣಗೊಂಡು ಅವರು ಸಾವನ್ನಪ್ಪಿದ್ದಾರೆ. ಕಳೆದ ತಿಂಗಳು ಹನ್ನೆರಡನೆ ತಾರೀಕಿನಿಂದ ಅವರು ಆಸ್ಪತ್ರೆಯಲ್ಲಿ ಕೊರೊನಾ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು.
ಅವರನ್ನು ತಪಾಸಣೆಗೊಳಪಡಿಸಿದಾಗ ಕೊರೊನ ಪಾಸಿಟಿವ್ ಆಗಿದ್ದು ಕಂಡು ಬಂದಿತ್ತು. ತದನಂತರ ಅವರನ್ನು ಅಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನ ಪ್ರೊಟೊಕಾಲ್ ಪ್ರಕಾರ ಬುಧವಾರ ಶವಸಂಸ್ಕಾರವನ್ನು ದುಬೈಯಲ್ಲಿಯೇ ನಡೆಸುವುದಾಗಿ ಸಂಬಂಧಿಕರು ತಿಳಿಸಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












