ಫಾಲೋ ಮಾಡಿದ ಮೂರೇ ವಾರಗಳಲ್ಲಿ ಮೋದಿಯನ್ನು ಅನ್ ಫಾಲೋ ಮಾಡಿದ ಅಮೆರಿಕಾದ ವೈಟ್ ಹೌಸ್

0
1035

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಎ. 29: ಅಮೆರಿಕದ ಅಧ್ಯಕ್ಷರ ಅಧಿಕೃತ ವಸತಿ ವೈಟ್‍ಹೌಸ್ ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಟ್ವಿಟರ್ ನಲ್ಲಿ ಅನ್‍ಫಾಲೋ ಮಾಡಿ ಅಚ್ಚರಿ ಉಂಟುಮಾಡಿದೆ. ಮೋದಿಯನ್ನು ವೈಟ್‍ಹೌಸ್ ಟ್ವಿಟರ್ ನಲ್ಲಿ ಫಾಲೋ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ ಫಾಲೋ ಮಾಡಿದ ಮೂರು ವಾರಗಳಲ್ಲಿ ಮೋದಿಯನ್ನು ವೈಟ್‍ಹೌಸ್ ಅನ್‍ಫಾಲೊ ಮಾಡಿಬಿಟ್ಟಿದೆ.

ಪ್ರಧಾನಿಯ ಅಧಿಕೃತ ಟ್ವಿಟರ್ ಅಲ್ಲದೆ ಖಾಸಗಿ ಖಾತೆಯನ್ನು ಕೂಡ ವೈಟ್ ಹೌಸ್ ಪಾಲೊ ಮಾಡಿತ್ತು. ನಂತರ ಭಾರತದ ಅಮೆರಿಕ ದೂತವಾಸ, ಅಮೆರಿಕದ ಭಾರತ ದೂತವಾಸ, ರಾಷ್ಟ್ರಪತಿಯ ಅಧಿಕೃತ ಪುಟವನ್ನು ವೈಟ್‍ಹೌಸ್ ಪಾಲೊ ಮಾಡಿತ್ತು. ಈಗ ಅವೆಲ್ಲ ಅನ್‍ಪಾಲೋ ಆಗಿದೆ. ಕೊರೊನಕ್ಕೆ ಮದ್ದುಕೊಡಲು ಭಾರತ ಸಿದ್ಧವಾದ ಬಳಿಕ ವೈಟ್‍ಹೌಸ್ ಮೋದಿಯ ಖಾತೆಯನ್ನು ಪಾಲೊ ಮಾಡಲು ಆರಂಭಿಸಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರ೦ಪ್ ಮತ್ತು ಭಾರತದ ಪ್ರಧಾನಿಯ ನಡುವಿನ ಪರಸ್ಪರ ಸೌಹಾರ್ದದ ಗುರುತು ಇದು ಎಂದು ಹಲವರು ಹೇಳಿಕೊಂಡಿದ್ದರು. ಯಾವಾಗಲೋ ಒಮ್ಮೆ ವೈಟ್ ಹೌಸ್ ಇತರ ದೇಶಗಳ ನಾಯಕರನ್ನು ಫಾಲೊ ಮಾಡುತ್ತದೆ. ಈಗ ವೈಟ್ ಹೌಸ್ ಫಾಲೊ ಮಾಡುವವರ ಸಂಖ್ಯೆ 19ರಿಂದ 13ಕ್ಕೆ ಇಳಿದಿದೆ. ಐದು ಲಕ್ಷ ಫಾಲೊವರ್ಸ್ ವೈಟ್‍ಹೌಸ್‍ನ ಟ್ವಿಟರ್ ಗಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.