ಕಿಮ್ ಗೆ ಕೊರೊನಾದ ಭೀತಿ: ದ.ಕೊರಿಯ

0
778

ಸನ್ಮಾರ್ಗ ವಾರ್ತೆ

ಸೋಲ್, ಎ. 29: ಎರಡು ವಾರಕ್ಕೂ ಹೆಚ್ಚು ಸಮಯ ಸಾರ್ವಜನಿಕರ ಕ್ಷೇತ್ರದಲ್ಲಿ ಕಾಣಿಸದ ಉತ್ತರಕೊರಿಯ ಅಧ್ಯಕ್ಷ ಕಿಂ ಜೊಂಗ್ ಉನ್‍ಗೆ ಕೊರೊನಾದ ಹೆದರಿಕೆ ಎಂದು ದಕ್ಷಿಣ ಕೊರಿಯಾ ಹೇಳಿದೆ. ಜೊಂಗ್ ಉನ್ ಬಗ್ಗೆ ವಿಶ್ವದಲ್ಲಿ ಹಲವು ರೀತಿಯ ಕತೆಗಳು ಕೇಳುತ್ತಿವೆ. ಆದರೆ ಜಗತ್ತನ್ನೆ ಅಧೀನಕ್ಕೊಳಪಡಿಸಿದ ಕೊರೊನಾ ಭೀತಿಯಿಂದ ಅವರು ಹೊರಗೆ ಬರುತ್ತಿಲ್ಲ ಎಂದು ದಕ್ಷಿಣ ಕೊರಿಯದ ಉತ್ತರ ಕೊರಿಯನ್ ವಿಷಯಗಳ ಸಚಿವ ಕಿಂ ಯಿವೊನ್ ಚುಲ್ ಹೇಳಿದರು. ರಾಷ್ಟ್ರಪಿತ ಅಜ್ಜ ಕಿಂ ಇಲ್ ಸಾಂಗ್‍ರ ಹುಟ್ಟುಹಬ್ಬದ ವೇಳೆಯೂ ಬಹಿರಂಗವಾಗಿ ಕಿಂ ಕಾಣಿಸಿಕೊಂಡಿಲ್ಲ.

ಕಿನ್ ಜೊಂಗ್ ಉನ್ ಮೃತಪಟ್ಟಿದ್ದು ಸಹೋದರಿ ಅಧಿಕಾರದ ಸಮೀಪದಲ್ಲಿದ್ದಾರೆ ಎಂದು ವರದಿ ಇತ್ತು. ಕಿಮ್‍ಗೆ ಏನಾಗಿದೆ ಎಂದು ನನಗೆ ಗೊತ್ತಿದೆ, ಆದರೆ ನಾನು ಹೇಳುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಬೆನ್ನಿಗೆ ಸಖ್ಯ ಪಾರ್ಟಿಯಾದ ದಕ್ಷಿಣ ಕೊರಿಯ ವಿವರಣೆ ನೀಡಿದೆ. 20 ದಿವಸಕ್ಕಿಂತ ಹೆಚ್ಚು ಕಾಲ ಸಾರ್ವಜನಿಕ ವೇದಿಕೆಯಿಂದ ದೂರ ನಿಂತ ಅನುಭವ ಈ ಹಿಂದೆಯೂ ಇದೆ ಎಂದು ಸಚಿವ ಕಿಂ ಯಿವೊನ್ ಚುಲ್ ಹೇಳಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.