ಸನ್ಮಾರ್ಗ ವಾರ್ತೆ
ಕಣ್ಣೂರ್, ಎ. 29: ವಿದೇಶದಿಂದ ಊರಿಗೆ ಬಂದು ನಲ್ವತ್ತಮೂರು ದಿನ ಆದ ಬಳಿಕ ವ್ಯಕ್ತಿಯೊಬ್ಬರಿಗೆ ಕೊರೊನಾ ವೈರಸ್ ಬಾಧಿಸಿದ ಘಟನೆ ಕಣ್ಣೂರಿನಲ್ಲಿ ನಡೆದಿದೆ. ಮಂಗಳವಾರ ಮೂವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಇವರಲ್ಲಿ ಇಬ್ಬರು ದುಬೈಯಿಂದ ಬಂದವರು. ಇವರಿಬ್ಬರಲ್ಲಿ ಊರಿಗೆ ಬಂದು ಒಬ್ಬಳಿಗೆ 43 ದಿವಸ, ಇನ್ನೊಬ್ಬಳಿಗೆ 39 ದಿವಸ ಆಗಿದೆ. ಮಾರ್ಚ್ 21ಕ್ಕೆ ಚೆರುವಂಚೇರಿಯ ಮಹಿಳೆ ಮತ್ತು ಇನ್ನೋರ್ವ ಮಹಿಳೆ ಮಾರ್ಚ್ 17 ರಂದು ಊರಿಗೆ ಬಂದಿದ್ದರು.
ಹಿಂದೆಯೂ ಕಣ್ಣೂರು ಜಿಲ್ಲೆಯಲ್ಲಿ 28 ದಿನಗಳ ಕೊರೊಂಟೈನ್ ಆಗಿದ್ದವರಿಗೆ ನಂತರ ಕೊರೊನಾ ಪಾಸಿಟಿವ್ ಆಗಿದೆ. ಕೊರನಾ ಪೀಡಿತ ಮುರ್ಯಾಡ್ ನಿವಾಸಿ ಐಎಕ್ಸ್ 344 ವಿಮಾನದಲ್ಲಿ ಕಲ್ಲಿಕೋಟೆಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ್ದರು. ಚೆರುವಂಚೇರಿ ನಿವಾಸಿ ಮಹಿಳೆ ಐಎಕ್ಸ್ 434 ವಿಮಾನದಲ್ಲಿ ನೆಡುಂಬಶ್ಶೇರಿ ಮೂಲಕ ಬಂದಿದ್ದರು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












