ಧಾರ್ಮಿಕ ಸ್ವಾತಂತ್ರ್ಯ: ಸಿರಿಯ, ಉ.ಕೊರಿಯದ ಜೊತೆ ಭಾರತ- ಅಮೆರಿಕದ ಆಯೋಗ

0
803

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಎ. 29: ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಕೋಮು ಅತಿಕ್ರಮಣಗಳು ಮುಂದುವರಿಯುತ್ತಿದ್ದು ಇದೇವೇಳೆ ಅಮೆರಿಕದ ಆಯೋಗ ಮುನ್ನೆಚ್ಚರಿಕೆ ನೀಡಿದೆ. ಅಮೆರಿಕದ ಸರಕಾರಿ ಸಂಸ್ಥೆ ಯುನೈಟೆಡ್ ಸ್ಟೇಟ್ಸ್ ಕಮಿಶನ್ ಆಫ್ ಇಂಟರ್‍ನ್ಯಾಶನಲ್ ರಿಲಿಜಿಯನ್ಸ್ ಫ್ರೀಡಂ ಇದರ ವರದಿಯಲ್ಲಿ, ಪಾಕಿಸ್ತಾನ, ಚೀನ, ಉತ್ತರಕೊರಿಯ, ಸಿರಿಯ ,ಮ್ಯಾನ್ಮಾರ್ ರಾಷ್ಟ್ರಗಳ ಸಹಿತ 14 ದೇಶಗಳ ಜೊತೆ ಭಾರತವನ್ನು ಸೇರಿಸಲಾಗಿದೆ. ಪೌರತ್ವ ತಿದ್ದುಪಡಿ ಕಾನೂನು ಭಾರತದ ಪರಿಸ್ಥಿತಿಯನ್ನು ಕೆಡಿಸಿತು ಎಂದು ಅಮೆರಿಕದ ಈ ಸಂಸ್ಥೆ ಹೇಳಿದೆ.

ಧಾರ್ಮಿಕ ಸಹಿಷ್ಣುತೆ, ಧಾರ್ಮಿಕ ಸ್ವಾತಂತ್ರ್ಯ ಖಚಿತಪಡಿಸುವ ಅಗತ್ಯವಿರುವ ದೇಶಗಳ ಪಟ್ಟಿಯಲ್ಲಿ ಆಯೋಗ ಭಾರತವನ್ನು ಸೇರಿಸಿದೆ. ಈ ಸಾಲಿಗೆ 2004ರ ನಂತರ ಭಾರತ ಮೊದಲ ಬಾರಿ ಸೇರಿಕೊಂಡಿದೆ. ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದೇಶವ್ಯಾಪಿ ದಾಳಿಗಳು ಮತ್ತು ಹಿಂಸೆಗಳು ಹೆಚ್ಚುತ್ತಿವೆ. ಧಾರ್ಮಿಕ ಸ್ವಾತಂತ್ರ್ಯ ನಶಿಸುವ ಕಾರ್ಯದಲ್ಲಿ ಭಾರತದ ಸರಕಾರಿ ಸಂಸ್ಥೆಗಳು, ಅಧಿಕೃತ್ ಮೂಲಗಳು ಜವಾಬ್ದಾರವಾಗಿವೆ ಎಂದು ಅದು ಹೇಳಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.