ಸನ್ಮಾರ್ಗ ವಾರ್ತೆ
ಮೊರಾದಾಬಾದ್, ಎ. 30: ವೀಸಾ ನಿಯಮ ಉಲ್ಲಂಘಿಸಿದ್ದಕ್ಕೆ ಕೇಸು ದಾಖಲಿಸಿಕೊಂಡು ಎಂಟು ಮಂದಿ ತಬ್ಲೀಗ್ ಜಮಾಅತ್ ಕಾರ್ಯಕರ್ತರನ್ನು ಉತ್ತರಪ್ರದೇಶ ಪೊಲೀಸರು ಜೈಲಿಗೆ ತಳ್ಳಿದ್ದಾರೆ. ಇವರು ಇಂಡೊನೇಶಿಯದವರು. ಕೊರೊಂಟೈನ್ ಕಾಲ ಮುಗಿದೊಡನೆ ಇವರನ್ನು ಜೈಲಿಗೆ ತಳ್ಳಲಾಗಿದೆ. ಎಪ್ರಿಲ್ ಒಂದಕ್ಕೆ ಈ ಇಂಡೊನೇಶಿಯನ್ ಪ್ರಜೆಗಳನ್ನು ಕಸ್ಟಡಿಗೆ ಪಡೆಯಲಾಗಿತ್ತು. ಕೊರೊನ ವ್ಯಾಪಿಸಿದ ಹಿನ್ನೆಲೆಯಲ್ಲಿ ಇವರನ್ನು ಕೊರೊಂಟೈನ್ನಲ್ಲಿರಿಸಲಾಗಿದೆ. ನಿರೀಕ್ಷಣಾ ಕಾಲ ಮುಗಿದು ಕೋರ್ಟಿಗೆ ಹಾಜರುಪಡಿಸಲಾಗಿತ್ತು ಎಂದು ಠಾಕೂರ್ ದ್ವಾರ ಡಿಎಸ್ಪಿ ವಿಶಾಲ್ ಯಾದವ್ ತಿಳಿಸಿದರು.
ದಿಲ್ಲಿ ನಿಝಾಮುದ್ದೀನ್ ಮರ್ಕಝ್ನಲ್ಲಿ ನಡೆದ ತಬ್ಲೀಗ್ ಸಮ್ಮೇಳನಕ್ಕೆ ಹೋಗಿದ್ದವರಲ್ಲಿ ಕೊರೊನ ವೈರಸ್ ಕಂಡು ಬಂದಿತ್ತು. ತದನಂತರ ಸಮ್ಮೇಳನಕ್ಕೆ ವಿದೇಶದಿಂದ ಬಂದಿದ್ದ ಪ್ರಜೆಗಳ ವಿರುದ್ಧ ವೀಸ ನಿಯಮ ಉಲ್ಲಂಘಿಸಿದ ಆರೋಪ ಹೊರಿಸಿ ಕೇಸು ದಾಖಲಿಸಿಕೊಳ್ಳಲಾಗಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












