ಸನ್ಮಾರ್ಗ ವಾರ್ತೆ
ಛತ್ತೀಸ್ಗಡ, ಎ.30: ಕೊರೊನಾ ಬಾಧಿಸಿ ಮೃತಪಟ್ಟ ಲುಧಿಯಾನ ಪೊಲೀಸ್ ಅಸಿಸ್ಟೆಂಟ್ ಕಮಿಶನರ್ ಅನಿಲ್ ಕೊಹ್ಲಿಯ ಪುತ್ರನಿಗೆ ಸಬ್ ಇನ್ಸ್ ಪೆಕ್ಟರ್ ಹುದ್ದೆ ನೀಡುವುದಾಗಿ ಪಂಜಾಬ್ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಡಿಜಿಪಿ ದಿನಕರ್ ಗುಪ್ತ ತಿಳಿಸಿದ್ದಾರೆ. ಕೊರೊನಾ ಪ್ರತಿರೋಧ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಇರುವ ಉನ್ನತ ಪೊಲೀಸಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ನಡೆಸಿ ಡಿಜಿಪಿ ಈ ವಿಷಯವನ್ನು ತಿಳಿಸಿದ್ದಾರೆ.
ಅನಿಲ್ ಕೊಹ್ಲಿಯ ಮಗ ಪದವಿ ಗಳಿಸಿದೊಡನೆ ಪೊಲೀಸ್ನಲ್ಲಿ ನೇಮಕಾತಿ ಲಭಿಸಲಿದೆ. ಕೊರೊನಾ ಪೀಡಿತರಾಗಿ ದೇಶದಲ್ಲಿ ಮೃತಪಟ್ಟಿರುವ ಮೊದಲ ಉನ್ನತ ಪೊಲೀಸ್ ಅಧಿಕಾರಿ ಕೊಹ್ಲಿ (52) ಆಗಿದ್ದಾರೆ. ಈ ತಿಂಗಳು 13ಕ್ಕೆ ಅವರಿಗೆ ಕೊರೊನಾ ಪಾಸಿಟಿವ್ ಎಂದು ಗೊತ್ತಾಗಿತ್ತು ಎಪ್ರಿಲ್ ಹದಿನೆಂಟರಂದು ಅವರು ಕೊನೆಯುಸಿರೆಳೆದಿದ್ದಾರೆ. ಕೊರೊನಾ ಪ್ರತಿರೋಧ ಕಾರ್ಯದಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ ಪೊಲೀಸಧಿಕಾರಿಗಳು ಸೌಖ್ಯವನ್ನು ನೋಡಿಕೊಳ್ಳುವುದಕ್ಕಾಗಿ ವಿಶೇಷ ಸಮಿತಿ ರೂಪಿಸಬೇಕೆನ್ನುವ ಶಿಫಾರಸ್ಸನ್ನು ಪಂಜಾಬ್ ಮುಖ್ಯಮಂತ್ರಿ ಸ್ವೀಕರಿಸಿದರೆಂದು ಡಿಜಿಪಿ ತಿಳಿಸಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












