ಮರಳುತ್ತಿರುವ ಕಾರ್ಮಿಕರು; ಆತಂಕದಲ್ಲಿ ಪಂಜಾಬಿನ ಉದ್ಯಮ, ಕೃಷಿ ಕ್ಷೇತ್ರ

0
382

ಸನ್ಮಾರ್ಗ ವಾರ್ತೆ

ಅಮೃತಸರ,ಮೇ.3: ಅಂತಾರಾಜ್ಯ ವಲಸೆ ಕಾರ್ಮಿಕರು ಮರಳುತ್ತಿರುವುದು ಪಂಜಾಬಿನ ಉದ್ಯಮ, ಕೃಷಿ ಕ್ಷೇತ್ರದಲ್ಲಿ ಆತಂಕದ ಕಾರ್ಮೋಡ ಮೂಡಿಸಿದೆ. ಇಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ವಲಸೆ ಕಾರ್ಮಿಕರಿದ್ದು ಇದರಲ್ಲಿ 3 ಲಕ್ಷ ಮಂದಿ ತಮ್ಮೂರಿಗೆ ಹೋಗುವುದಕ್ಕೆ ಆನ್‍ಲೈನ್ ಮೂಲಕ ಹೆಸರು ನೋಂದಾಯಿಸಿದ್ದಾರೆ.

ಆನ್‍ಲೈನ್ ಅರ್ಜಿ ಹಾಕಿದವರಲ್ಲಿ ಹೆಚ್ಚಿನ ಜನರು ಉದ್ಯಮ ಕ್ಷೇತ್ರದ ಕೆಲಸಗಾರರು. ಇವರು ಊರಿಗೆ ಮರಳಿದರೆ ಅವರು ಬಂದ ನಂತರವೇ ಕಾರ್ಖಾನೆಗಳಲ್ಲಿ ಉತ್ಪಾದನೆ ಮಾಡುವುದು ಸಾಧ್ಯ. ಇಂತಹದ್ದೇ ಸಮಸ್ಯೆ ಕೃಷಿ ಕ್ಷೇತ್ರವೂ ಎದುರಿಸುತ್ತಿದೆ.

ಸ್ಟೇಟ್ ಕಂಟ್ರೋಲ್ ರೂಮ್‍ನ ಲೆಕ್ಕದ ಪ್ರಕಾರ ಶನಿವಾರದವರೆಗೆ ಊರಿಗೆ ಹೋಗಲು 2,83,223 ಮಂದಿ ನೋಂದಾಯಿಸಿದ್ದಾರೆ. ಇವರಲ್ಲಿ ಶೆ. 84.7 ಮಂದಿ ಕೂಡ ಉತ್ತರಪ್ರದೇಶ, ಬಿಹಾರ ರಾಜ್ಯಗಳಿಗೆ ಸೇರಿದವರು. ಉತ್ತರಪ್ರದೇಶದವರು 1.44 ಲಕ್ಷ, ಬಿಹಾರದವರು 95,000, ಝಾರ್ಕಂಡ್‍ನವರು 4760, ಜಮ್ಮು-ಕಾಶ್ಮೀರದಿಂದ 4304 ಮಂದಿ ನೋಂದಾಯಿಸಿದ್ದಾರೆ.