ಅಸಮರ್ಪಕ ವಿದ್ಯುತ್ ಶುಲ್ಕ: ಜಿಲ್ಲಾಧಿಕಾರಿ ಮತ್ತು ಮೆಸ್ಕಾಮ್ ಗೆ ವೆಲ್ಫೇರ್ ಪಾರ್ಟಿಯಿಂದ ಮನವಿ

0
555

ಸನ್ಮಾರ್ಗ ವಾರ್ತೆ

ಮಂಗಳೂರು, ಮೇ 14-  ಲಾಕ್ ಡೌನ್ ನಿಂದಾಗಿ ಈಗಾಗಲೇ ಜನಸಾಮಾನ್ಯರ ಬದುಕು ದುರ್ಬರವಾಗಿರುವಂತೆಯೇ ವಿದ್ಯುತ್ ಇಲಾಖೆಯು ಅದರ ಮೇಲೆ ಬರ ಎಳೆಯಲು ಹೊರಟಿರುವುದನ್ನು ಖಂಡಿಸಿರುವ ವೆಲ್ ಫೇರ್ ಪಾರ್ಟಿಯು ಈ ಬಗ್ಗೆ ಮರು ಪರಿಶೀಲನೆಗೆ ಆಗ್ರಹಿಸಿದೆ.

ಈ ಹಿನ್ನೆಲೆಯಲ್ಲಿ ವೆಲ್ಫೇರ್ ಪಾರ್ಟಿ ದಕ್ಷಿಣ ಜಿಲ್ಲೆಯ ವತಿಯಿಂದ ವಿದ್ಯುತ್ ಶುಲ್ಕ ಮತ್ತು ಅದರ ದಂಡ ಪಾವತಿಯ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಮತ್ತು ಬಿಜೈ ಮೆಸ್ಕಾಂ ಕಚೇರಿ ಮನವಿ ನೀಡಲಾಯಿತು ಹಾಗೂ ಇಂಧನ ಸಚಿವರಿಗೆ ಪೋಸ್ಟ್‌ ಮುಖಾಂತರ ಮನವಿ ಕಳಿಸಿ ಕೊಡಲಾಯಿತು. ಈ ಸಂದರ್ಭದಲ್ಲಿ ಪಾರ್ಟಿಯ ಜಿಲ್ಲಾ ನಾಯಕರಾದ ಮುತ್ತಲಿಬ್, ಸಲಾಂ ಸಿ.ಎಚ್ ಹಾಗೂ ಉಳ್ಳಾಲ ಕಾರ್ಯದರ್ಶಿ ಯಾದ ಸೈಪುಲ್ಲಾ, ಸದಸ್ಯ ಪಝಲ್ ಪಿಲಾರ್, ಎಫ್ ಐ ಟಿ ಯು ಜಿಲ್ಲಾಧ್ಯಕ್ಲರಾದ ಅಬ್ದುಲ್ ಜಲೀಲ್ ಉಳ್ಳಾಲ, ಕಾರ್ಯದರ್ಶಿ ದಿವಾಕರ ಉಪಸ್ಥಿತರಿದ್ದರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.