ಕೇಂದ್ರ ಸರಕಾರ ಘೋಷಿಸಿದ ಕೋವಿಡ್-19 ಆರ್ಥಿಕ ಪ್ಯಾಕೇಜ್ ಬರೀ ಲೊಳಲೊಟ್ಟೆ- ಮಮತಾ ಬ್ಯಾನರ್ಜಿ

0
506

ಸನ್ಮಾರ್ಗ ವಾರ್ತೆ

ಕೊಲ್ಕತಾ,ಮೇ‌.14: ಕೇಂದ್ರ ಸರಕಾರ ಘೋಷಿಸಿದ ಆರ್ಥಿಕ ಪ್ಯಾಕೇಜ್ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಖಾರವಾಗಿಯೇ ಮಾತನಾಡಿದ್ದರು ರಾಜ್ಯಗಳಿಗೆ ನೆರವಾಗಲಾರದ ಆರ್ಥಿಕ ಪ್ಯಾಕೇಜ್ ಇದು. ಬರೀ ಸೊನ್ನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ಯಾಕೇಜ್ ಘೋಷಿಸುವ ಮೂಲಕ ಜನರನ್ನು ತಪ್ಪುದಾರಿಗೆಳೆಯಲಾಗುತ್ತಿದೆ. ರಾಜ್ಯಗಳನ್ನು ಆರ್ಥಿಕ ಲಾಕ್‍ಡೌನ್‍ಗೆ ಕೇಂದ್ರ ಸರಕಾರ ದೂಡಿ ಹಾಕುತ್ತಿದೆ ಎಂದು ಮಮತಾ ಘೋಷಿಸಿದರು.

ಕೇಂದ್ರ ಸರಕಾರ ಘೋಷಿಸಿದ ಆರ್ಥಿಕ ಪ್ರೋತ್ಸಾಹಕ ಪ್ಯಾಕೇಜ್ ಬರೇ ಸೊನ್ನೆಯಾಗಿದೆ. ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯ ಇದು. ಅಸಂಘಟಿತ ಕ್ಷೇತ್ರಕ್ಕೂ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಿಗೂ, ಉದ್ಯೋಗಕ್ಕೂ ಯಾವ ಸಹಾಯದ ಪ್ಯಾಕೇಜು ಇಲ್ಲ ಎಂದು ಮಮತಾ ಹೇಳಿದರು.

ಪ್ರಧಾನಿ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೊಷಿಸುವಾಗ ರಾಜ್ಯಗಳ ಹಿತವನ್ನು ಕೂಡ ಕಾಯುತ್ತಾರೆನ್ನುವ ನಿರೀಕ್ಷೆ ಇತ್ತು. ಈಗ ಹುಸಿಯಾಗಿದೆ. ಪ್ರಧಾನಿ ಹೇಳಿದ್ದೆಲ್ಲವೂ ಬರೇ ನಾಟಕ ಎಂದು ವಿತ್ತ ಸಚಿವರು ಸಾಬೀತು ಪಡಿಸಿದ್ದಾರೆ ಎಂದು ಮಮತಾ ಹೇಳಿದರು.

ರೈತ ಸಾಲ ಮನ್ನಾ ಮಾಡದೇ ಇರುವುದರ ಬಗ್ಗೆಯೂ ಮಮತಾ ಟೀಕಿಸಿದ್ದಾರೆ. ರಾಜ್ಯಗಳಿಗೆ ಹಣ ನೀಡದೇ ಪುನಃ ಕ್ಷಷ್ಟಕ್ಕೆ ದೂಡಿಹಾಕುವುದು ಕೇಂದ್ರದ ಪ್ಯಾಕೇಜ್ ಎಂದು ಅವರು ಹೇಳಿದರು.