ವಯನಾಡ್ ಕ್ಷೇತ್ರದ ಆದಿವಾಸಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕಲಿಕಾ ಸಾಮ್ರಗಿ ನೀಡಲು ರಾಹುಲ್ ಗಾಂಧಿ ತೀರ್ಮಾನ

0
566

ಸನ್ಮಾರ್ಗ ವಾರ್ತೆ

ಮಾನಂದವಾಡಿ, ಜೂ.2: ವಯನಾಡಿನ ಆದಿವಾಸಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕಲಿಕೆ ಸಾಮಾಗ್ರಿಗಳನ್ನು ಒದಗಿಸುವುದಾಗಿ ರಾಹುಲ್ ಗಾಂಧಿ ಹೇಳಿದರು. ಈ ವಿಷಯವನ್ನು ವಯನಾಡ್ ಸಂಸದರಾದ ರಾಹುಲ್ ಗಾಂಧಿ ಮುಖ್ಯಮಂತ್ರಿ ಮತ್ತು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.

ಆದಿವಾಸಿ ವಿದ್ಯಾರ್ಥಿಗಳಿಗೆ ಹೊಸ ಉಪಕರಣಗಳನ್ನು ನೀಡುವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ರಿಗೆ ಅವರು ಪತ್ರ ಬರೆದರು. ಯಾವೆಲ್ಲ ವಸ್ತುಗಳು ಬೇಕೆಂದು ತಿಳಿಸಬೇಕೆಂದು ಮತ್ತು ಹೊಸ ಅಧ್ಯಯನ ರೀತಿಗೆ ತನ್ನ ಸಂಪೂರ್ಣ ಬೆಂಬಲ ಇದೆ ಎಂದು ರಾಹುಲ್ ಹೇಳಿದ್ದಾರೆ.

ಆನ್‍ಲೈನ್ ತರಗತಿಗಳಲ್ಲಿ ಭಾಗವಹಿಸಲು ಸಾಧ್ಯವಾಗದೇ ಮನನೊಂದು ಮಲಪ್ಪುರಂ ವಲಂಚೇರಿಯಲ್ಲಿ ಹದಿನಾಲ್ಕು ವರ್ಷದ ವಿದ್ಯಾರ್ಥಿನಿ ಕಳೆದ ದಿವಸ ಆತ್ಮಹತ್ಯೆ ಮಾಡಿಕೊಂಡಿದ್ದಳು. ಟಿವಿ ಮತ್ತು ಸ್ಮಾರ್ಟ್ ಫೋನ್ ಇಲ್ಲದ ಕುಟುಂಬ ಅವಳದ್ದಾಗಿತ್ತು. ಆನ್‍ಲೈನ್ ಸೌಕರ್ಯ ಇಲ್ಲದ ಎರಡೂವರೆ ಲಕ್ಷದಷ್ಟು ವಿದ್ಯಾರ್ಥಿಗಳು ಕೇರಳದಲ್ಲಿದ್ದಾರೆ ಎಂದೂ ಇದು ಪ್ರಾಥಮಿಕ ಅಂದಾಜು ಸಂಖ್ಯೆಯಾಗಿದೆ ಎಂದೂ ಸಾರ್ವಜನಿಕ ಶಿಕ್ಷಣ ನಿರ್ದೇಶಕರು ಕಳೆದ ದಿವಸ ತಿಳಿಸಿದ್ದಾರೆ.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ