ತಮಿಳ್ನಾಡು: ಚೆನ್ನೈಯಲ್ಲಿ ಆಧಾರ್ ವಿವರಗಳನ್ನು ಕೊಟ್ಟರೆ ಮಾತ್ರ ಕ್ಷೌರ

0
459

ಸನ್ಮಾರ್ಗ ವಾರ್ತೆ

ಚೆನ್ನೈ,ಜೂ.2: ಕೊರೋನಾ ಹರಡುವ ಹಿನ್ನೆಲೆಯಿಂದ ಚೆನ್ನೈ ನಗರದಲ್ಲಿ ಸಲೂನ್‍ಗಳಲ್ಲಿ ಕೂದಲು ಕತ್ತರಿಸಿಕೊಳ್ಳಬೇಕಾದರೆ ಆಧಾರ್ ಕಾರ್ಡ್ ಕಡ್ಡಾಯವಾಗಿ ನೀಡಬೇಕಾಗುತ್ತದೆ. ಮೊದಲು ಆಧಾರ್ ಕಾರ್ಡ್ ಸಲೂನ್ ಮಾಲಕಗೆ ತೋರಿಸಿ ಹೆಸರು ವಿಳಾಸ ಮನವರಿಕೆಯಾದ ಬಳಿಕ ಫೋನ್ ನಂಬರ್, ಆಧಾರ್ ಕಾರ್ಡ್ ನಂಬರನ್ನು ಬರೆದಿಟ್ಟು ಕೊಂಡು ನಂತರವೇ ಕ್ಷೌರ ಮಾಡಿಕೊಳ್ಳಲಾಗುತ್ತಿದೆ.

ಲಾಕ್‍ಡೌನ್ ಬಳಿಕ ಸಲೂನ್‍ಗಳನ್ನು ತೆರೆಯಲು ಸೋಮವಾರ ತಮಿಳ್ನಾಡು ಸರಕಾರ ಅನುಮತಿ ಕೊಟ್ಟಿತ್ತು. ಇದರೊಂದಿಗೆ ರೋಗ ದೃಢೀಕರಣಗೊಂಡವರನ್ನು ಗುರುತಿಸಿ ಸಂಪರ್ಕ ಪತ್ತೆಹಚ್ಚಲು ಆಧಾರ್ ಕಾರ್ಡ್ ವಿವರಗಳನ್ನು ಸಂಗ್ರಹಿಸಲು ಸೂಚಿಸಲಾಗಿತ್ತು.

ಸೆಲೂನ್, ಬಾರ್ಬರ್ ಶಾಪ್‍ಗಳಲ್ಲಿ ಸರಿಯಾದ ಸಾಮಾಜಿಕ ಅಂತರ ಖಚಿತಪಡಿಸಬೇಕು. ಸುರಕ್ಷೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು. ಹೀಗೆ ಮಾಡದವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಸರಕಾರ ಎಚ್ಚರಿಕೆ ನೀಡಿತ್ತು. ತಮಿಳ್ನಾಡಿನಲ್ಲಿ ವಿವಿಧ ಸಡಿಲಿಕೆಯೊಂದಿಗೆ ಲಾಕ್‍ಡೌನನ್ನು ಜೂನ್ ಮೂವತ್ತರವರೆಗೆ ವಿಸ್ತರಿಸಲಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.