ಸನ್ಮಾರ್ಗ ವಾರ್ತೆ
ಬೆಂಗಳೂರು,ಜೂ.2: ಡಿಜಿಪಿ ಕಚೇರಿಯ ಆಂತರಿಕ ಸುರಕ್ಷಾ ವಿಭಾಗದ ಪೊಲೀಸ್ಗೆ ಕೊರೋನಾ ದೃಢಪಟ್ಟಿದ್ದು ಪೊಲೀಸರಿಂದ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆ ನಡೆಸಿದ್ದರಿಂದ ಇದು ಬಯಲಾಗಿದೆ. ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇವರು ಒಂದು ವಾರ ಮೊದಲು ಉತ್ತರ ಕರ್ನಾಟಕದ ತನ್ನ ಮನೆಗೆ ಹೋಗಿ ಬಂದಿದ್ದರು. ಮರಳಿದಾಗ ಅವರಲ್ಲಿ ಜ್ವರದ ಲಕ್ಷಣ ಕಾಣಿಸಿಕೊಂಡಿತ್ತು. ನಂತರ ಪರೀಕ್ಷೆಗೆ ಗುರಿಪಡಿಸಲಾಯಿತು. ರವಿವಾರ ಸಂಜೆ ಫಲಿತಾಂಶ ಪಾಸಿಟಿವ್ ಆಗಿ ಬಂದಿತ್ತು.
ಡಿಜಿಪಿ ಪ್ರವೀಣ್ ಸೂದ್, ಎಡಿಜಿಪಿಗಳಾದ ಉನ್ನತ ಪೊಲೀಸ್ ಧಿಕಾರಿಗಳ ಕಚೇರಿ ಇಲ್ಲಿವೆ. ಆದರೆ, ರೋಗ ಇರುವ ಪೊಲೀಸ್ ಸಿಬ್ಬಂದಿ ಉನ್ನತ ಅಧಿಕಾರಿಗಳಿರುವ ಕಚೇರಿ ಕಟ್ಟಡಕ್ಕೆ ಹೋಗಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ನಂತರ ಪೊಲೀಸ್ ಹೆಡ್ಕ್ವಾಟ್ರರ್ಸ್ ಪರಿಸರ ಶುಚೀಕರಿಸಲಾಗಿದೆ. ಬೆಂಗಳೂರು ಪೊಲೀಸರಲ್ಲಿ ಇಬ್ಬರಿಗೆ ಕೊರೋನ ದೃಢಪಟ್ಟಿತ್ತು. ಇಬ್ಬರೂ ರೋಗದಿಂದ ಗುಣಮುಖರಾಗಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












