ಸನ್ಮಾರ್ಗ ವಾರ್ತೆ
ವಾಷಿಂಗ್ಟನ್,ಜೂ.3: ಸಮಸ್ಯೆ ಉಂಟು ಮಾಡುವುದಕ್ಕಲ್ಲ ಅದನ್ನು ಬಗೆಹರಿಸುವುದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯತ್ನಿಸಬೇಕಾಗಿದೆ ಎಂದು ಡೆಮಕ್ರಾಟಿಕ್ ನಾಯಕ ಜೋ ಬೈಡನ್ ಕುಟುಕಿದ್ದಾರೆ. ಸಮಸ್ಯೆ ಉಂಟುಮಾಡುವುದು ಮತ್ತು ಅದನ್ನು ದೊಡ್ಡದು ಮಾಡುವುದೆಲ್ಲವೂ ಟ್ರಂಪ್ ಎಂದು ಬೈಡನ್ ಆರೋಪಿಸಿದರು. ತನ್ನನ್ನು ಗೆಲ್ಲಿಸಿದರೆ ದೇಶದಲ್ಲಿ ಸಮಾನತೆ ತರಲು ಯತ್ನಿಸುವೆ ಎಂದು ಬೈಡನ್ ಹೇಳಿದರು.
ಮಿನಿಯಪೊಲಿಸ್ ನಗರ ಪೊಲೀಸರು ಬಲಪ್ರಯೋಗಿಸಿ ಕೊರಳು ಅಮುಕಿ ಕಪ್ಪುವರ್ಣೀಯ ಜಾರ್ಜ್ ಪ್ಲಾಯ್ಡ್ರನ್ನು ಹತ್ಯೆಗೈದ ಘಟನೆಯಲ್ಲಿ ಅಮೆರಿಕದಾದ್ಯಂತ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಈ ಪರಿಸ್ಥಿತಿಯಲ್ಲಿ ಅಧ್ಯಕ್ಷ ಅಭ್ಯರ್ಥಿ ಕೂಡಾ ಆಗಿರುವ ಬೈಡನ್ರ ಟೀಕೆ ಬಂದಿದೆ.
ಬೈಡನ್ ರಾಜಕೀಯ ಬಡತನ ಎದುರಿಸುತ್ತಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದರು. ಬೈಡನ್ ರಾಜಕೀಯ ಜೀವನದಲ್ಲಿಯೂ ಪರಾಜಿತರು ಎಂದು ಟ್ರಂಪ್ ಟೀಕಿಸಿದ್ದರು.
“ಟ್ರಂಪ್ ಮೇರೆ ಮೀರುತ್ತಿದ್ದಾರೆ” ಎಂದು ಅಮೆರಿಕ ಜನ ಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪಲೋಸಿ ಹೇಳಿದ್ದಾರೆ. ಜಾರ್ಜ್ ಪ್ಲಾಯ್ಡ್ ಸಾವಿನಲ್ಲಿ ಮಾಜಿ ಅಧ್ಯಕ್ಷ ರಿಪಬ್ಲಿಕನ್ ಪಾರ್ಟಿ ನಾಯಕ ಜಾರ್ಜ್ ಬುಶ್ ಶೋಕ ವ್ಯಕ್ತಪಡಿಸಿದ್ದಾರೆ. ತುಂಬ ನೋವುಂಟು ಮಾಡುವ ಇಂತಹ ಘಟನೆಗಳು ನಮ್ಮ ದೇಶವನ್ನು ಉಸಿರುಗಟ್ಟಿಸುತ್ತಿದೆ ಎಂದು ಬುಶ್ ಹೇಳಿದರು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












